ಶಿರಸಿ: ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿ(ಟಿಎಂಎಸ್) ಯಲ್ಲಿ ನ.15 ಸೋಮವಾರದಿಂದ ಪ್ರತಿ ದಿನವೂ ಹಸಿ ಅಡಿಕೆ ಟೆಂಡರ್ ನಡೆಯಲಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ರೈತರು ಟೆಂಡರಿನ ಹಿಂದಿನ ದಿನವೇ ಹಸಿ ಅಡಿಕೆ ತಂದಲ್ಲಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಹಾಗೂ ಕಾವಲು ವ್ಯವಸ್ಥೆ ಇರುತ್ತದೆ. ಭದ್ರತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ತೂಕದ ಬಗ್ಗೆ ಸಂಘದಲ್ಲಿಯೇ “ವೇ ಬ್ರೀಡ್ಜ” ವ್ಯವಸ್ಥೆ ಇರುತ್ತದೆ. ವಿಕ್ರಿಯಾದ ದಿನವೇ ರೈತರಿಗೆ ಹಣ ಸಂದಾಯದ ವ್ಯವಸ್ಥೆ ಇರುತ್ತದೆ. ಟೆಂಡರಿನಲ್ಲಿ ಹಸಿ ಅಡಿಕೆ ಖರೀದಿಸಲು ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಬರುವ ಕಾರಣ ರೈತರ ಹಸಿ ಅಡಿಕೆಗೆ ಸ್ಫರ್ಧಾತ್ಮಕ ದರ ಲಭಿಸಲಿದೆ. ತೆರಿ ಅಡಿಕೆ ಇದ್ದಲ್ಲಿ ಚೀಲ ತುಂಬಿಕೊಂಡು ಬರಬೇಕಾಗಿ ಹಾಗೂ ಹಣ್ಣಡಿಕೆ ಮತ್ತು ಕಾಯಿ ಅಡಿಕೆ ಪ್ರತ್ಯೇಕ ಲಾಟ್ ಹಾಕಲು ಅನುಕೂಲವಾಗುವಂತೆ ಪ್ರತ್ಯೇಕಿಸಿ ತರಬೇಕೆಂದು ವಿನಂತಿಸಿದ್ದಾರೆ.