• Slide
    Slide
    Slide
    previous arrow
    next arrow
  • ತರಗತಿಯಲ್ಲಿ ಮೊಬೈಲ್ ಬಳಕೆ; 250ಕ್ಕೂ ಅಧಿಕ ವಿದ್ಯಾರ್ಥಿಗಳ ಮೊಬೈಲ್ ವಶಕ್ಕೆ

    300x250 AD

    ಕುಮಟಾ: ನಗರದ ಕಾಲೇಜೊಂದರಲ್ಲಿ ಶಿಕ್ಷಕರಿಗೆ ಗೊತ್ತಿಲ್ಲದೇ ಶಾಲಾ ಆವಾರದಲ್ಲಿ ಬಳಕೆ ಮಾಡುತ್ತಿದ್ದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.


    ವಿದ್ಯಾರ್ಥಿಗಳು ತರಗತಿಯ ಕಡೆ ಗಮನ ಹರಿಸುವುದಕ್ಕಿಂತಲೂ ಹೆಚ್ಚು ಬೇರೆ ಬೇರೆ ವಿದ್ಯಾರ್ಥಿಗಳೊಂದಿಗೆ ಚಾಟಿಂಗ್, ಫೇಸ್ ಬುಕ್‌ನಲ್ಲಿ ಕಾಲಹರಣ ಮಾಡುವುದು, ಇತರ ಶಾರ್ಟ್ ಎಂಟರ್‌ಟೇನ್‌ಮೆಂಟ್ ಆಪ್‌ಗಳಲ್ಲಿ ವಿಡಿಯೋಗಳನ್ನು ಮಾಡುವುದು ಮತ್ತು ಯುಟ್ಯೂಬ್ ಗಳಲ್ಲಿ ವಿಡಿಯೊಗಳನ್ನು ವೀಕ್ಷಣೆ ಮಾಡುವುದನ್ನು ಮಾಡುತ್ತಿದ್ದಾರೆ. ಇದೇ ಅನುಭವ ಕುಮಟಾ ಪಟ್ಟಣದ ಹನಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಿಗಾಗಿದೆ. ಹೀಗಾಗಿ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

    300x250 AD


    ಇನ್ನು ಪಾಲಕರು ಖುದ್ದಾಗಿ ಬಂದು ಅವರವರ ಮಕ್ಕಳ ಮೊಬೈಲ್ ತೆಗೆದುಕೊಂಡು ಹೋಗಲು ಶಿಕ್ಷಕರು ಸೂಚಿಸಿದ್ದಾರೆ. ಆದರೆ ಹಲವು ವಿದ್ಯಾರ್ಥಿಗಳು ಕಂಡ ಕಂಡವರನ್ನು ಪಾಲಕರೆಂದು ಹೇಳಿ ಮೊಬೈಲ್ ಪಡೆಯುವ ಪ್ರಯತ್ನ ಮಾಡಿಯೂ ಸಿಕ್ಕಿ ಬಿದ್ದಿದ್ದಾರೆ. ’ತರಗತಿ ಆರಂಭವಾಗುವುದಕ್ಕೆ ಮುನ್ನವೇ ಶಾಲಾ ಕೊಠಡಿಗಳಲ್ಲಿ ಮೊಬೈಲ್ ಬಳಸಬಾರದೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹೊರತಾಗಿಯೂ ವಿದ್ಯಾರ್ಥಿಗಳು ಮೊಬೈಲ್ ಬಳಸಿದ್ದರಿಂದ ವಶಪಡಿಸಿಕೊಂಡಿದ್ದೇವೆ’ ಎಂದು ಕಾಲೇಜು ಪ್ರಾಂಶುಪಾಲ ಸತೀಶ ನಾಯ್ಕ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top