ಕಾರವಾರ: ಜಿಲ್ಲೆಯ 10 ತಾಲೂಕಾ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಂಬಂಧಿಸಿದಂತೆ ಡಿಎಚ್’ಒ ಡಾ.ಶರದ್ ನಾಯಕ ಕಾರವಾರದಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಆಗಸ್ಟ್ ತಿಂಗಳವರೆಗಿನ ವೇತನ ನೀಡಲಾಗಿದೆ. ಈ ಹಿಂದೆ ಇದ್ದ ರೀತಿಯಲ್ಲಿ ವೇತನ ನೀಡುವಂತೆ ಹೇಳಲಾಗಿತ್ತು, ಆದರೆ ಯಾವುದೇ ಸಿಬ್ಬಂದಿಗೆ 15 ಸಾವಿರಕ್ಕಿಂತ ಕೆಳಗಿನ ವೇತನವಿದ್ದರೆ ಅವರಿಗೆ ಪಿಎಫ್ ಹಾಗೂ ಇಎಸ್‍ಐ ನೀಡಬೇಕಾಗುತ್ತದೆ. ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ ಕಾನೂನಂತೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಆಗದಿದ್ದರಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಮೇ, ಜೂನ್, ಜುಲೈ ತನಕ ವೇತನವಾಗಬೇಕಿತ್ತು. ಜುನ್ ವರೆಗೆ ವೇತನ ನೀಡಿದ್ದೇವೆ. ಆಗಸ್ಟ್ ನಿಂದ ಇಲಾಖೆ ಮೂಲಕ ನೀಡಲು ತಿಳಿಸಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಸಿಎಒ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಮೂಲಕ ವೇತನ ನೀಡಲು ತಿಳಿಸಿದೆ ಎಂದರು.