• Slide
  Slide
  Slide
  previous arrow
  next arrow
 • ನ.14 ರಿಂದ ಟಿಎಸ್ಎಸ್ ಆಸ್ಪತ್ರೆಯಲ್ಲಿ ಹೃದಯ ಆರೈಕೆ ವಿಭಾಗ-ಕ್ಯಾಥ್ ಲ್ಯಾಬ್ ಆರಂಭ

  300x250 AD

  ಶಿರಸಿ: ಇಲ್ಲಿನ ಪ್ರತಿಷ್ಟಿತ ಆಸ್ಪತ್ರೆಯಾಗಿರುವ ಶ್ರೀಪಾದ ಹೆಗಡೆ ಕಡವೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಟಿಎಸ್ಎಸ್) ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕ್ಯಾಥ್ ಲ್ಯಾಬ್ ಹಾಗು ಹೃದಯ ಆರೈಕೆ ವಿಭಾಗದ ಉದ್ಘಾಟನಾ ಸಮಾರಂಭ ನ.14ರಂದು ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಮ್ ವಿ ಜೋಶಿ ಕಾಗೇರಿ ಹೇಳಿದರು.

  ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ, ಮಾತನಾಡಿದ ಅವರು, ಜನರಿಗೆ ಈಗಾಗಲೇ ಸಂಸ್ಥೆಯ ವತಿಯಿಂದ ಸಾಕಷ್ಟು ಸೇವಗಳನ್ನು ನೀಡಲಾಗುತ್ತಿದ್ದು, ಈಗ ಹೃದಯ ಆರೈಕೆ ವಿಭಾಗ ಮತ್ತು ಕ್ಯಾಥ್ – ಲ್ಯಾಬ್ ಸೌಲಭ್ಯವನ್ನೂ ಹೊಸದಾಗಿ ನೀಡಲಾಗುತ್ತಿದೆ. ಪರಮಪೂಜನೀಯ ಸ್ವರ್ಣವಲ್ಲೀ ಶ್ರೀಗಳ ಅಮೃತಹಸ್ತದಿಂದ ಈ ವಿಭಾಗದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

  ಈ ಭಾಗದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಇಲ್ಲದಿರುವುದನ್ನು ಮನಗಂಡು ನಾವು ಆರಂಭಿಸಿದ್ದೇವೆ. ಮೊದಲಿಗೆ ಹಾರ್ಟ್ ಅಟ್ಯಾಕ್ ಆದಂತಹ ಸಂದರ್ಭದಲ್ಲಿ ಅವಶ್ಯವಿರುವ ಪ್ರಥಮ ಚಿಕಿತ್ಸೆ ಸೇವ ನೀಡುತ್ತೇವೆ. ಮುಂದಿನ ದಿನದಲ್ಲಿ ಹೃದಯ ಸರ್ಜರಿಯನ್ನು ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ರಾಜಾರಾಮ ಹೆಗಡೆ ದೊಡ್ಡೂರು ಹೇಳಿದರು.

  ಸಂಸ್ಥೆಯ ನಿರ್ದೇಶಕ ಎಮ್ ಎಮ್ ಹೆಗಡೆ ಮಾನೀಮನೆ ಮಾತನಾಡಿ,ಸೇವಾಮನೋಭಾವನೆಯಿಂದ ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದ ಹೃದಯ ಸಂಬಂಧಿ ಚಿಕಿತ್ಸೆ ತೆರೆಯಲಾಗುತ್ತಿದೆ. ಮುಂದಿನ ದಿನದಲ್ಲಿ ಈ ಕುರಿತಾಗಿ ಅತ್ಯಾಧುನಿಕ ಸೌಲಭ್ಯವನ್ನೂ ನೀಡಲಾಗುವುದು ಎಂದರು.

  300x250 AD

  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ ಮಾತನಾಡಿ, ಈ ಭಾಗದಲ್ಲಿ ದಿನಕ್ಕೆ ಒಬ್ಬರಂತೆ ತಿಂಗಳಿಗೆ ಕನಿಷ್ಠ 30 ರೋಗಿಗಳು ಹೃದಯ ಸ್ಥಂಬನದ ಕಾರಣಕ್ಕೆ ಆಸ್ಪತ್ರೆಗಳಿಗೆ ಓಡಾಡುತ್ತಿದ್ದಾರೆ. ಹಾಗಾಗಿ ಅವರ ಅಗತ್ಯತೆ ಮನಗಂಡು ಮೊದಲ ಹಂತದಲ್ಲಿ 5 ಕೋಟಿ ವೆಚ್ಚದಲ್ಲಿ ಈ ಸೌಲಭ್ಯವನ್ನು ಮಾಡಲಾಗಿದೆ. ಇದರ ಜೊತೆಗೆ ಮುಂದಿನ ದಿನದಲ್ಲಿ ನ್ಯೂರೋ ಸರ್ಜನ್ ಮೂಲಕ ಜನರಿಗೆ ಅಗತ್ಯ ಬೇಕಾದ ಸೇವಗಳನ್ನು ನೀಡಲಾಗುವುದು ಎಂದರು.

  ಟಿಎಸ್ಎಸ್ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಮಾತನಾಡಿ, ದಾಸನಕೊಪ್ಪ, ಹಾನಗಲ್ ಸೇರಿದಂತೆ ನಮ್ಮ ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಸೇವೆಯನ್ನು ನೀಡಲಾಗುತ್ತಿದೆ. ಜೊತೆಗಿನ ಸಹಕಾರಿ ಸಂಸ್ಥೆಯು ನೀಡುವ ವಿಮಾ ಸೌಲಭ್ಯವೂ ಜನರಿಗೆ ಅನುಕೂಲವಾಗುತ್ತಿದೆ ಎಂದರು.

  ಸುದ್ಧಿಗೋಷ್ಟಿಯಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ವೈದ್ಯರಾದ ಮೇಜರ್ ಜ್ಞಾನಪ್ರಕಾಶ ಕಾರಂತ ಇದ್ದರು

  Share This
  300x250 AD
  300x250 AD
  300x250 AD
  Leaderboard Ad
  Back to top