• Slide
  Slide
  Slide
  previous arrow
  next arrow
 • ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮ ಗೋ ಕಳ್ಳ ಸಾಗಾಣಿಕೆ; ಇಬ್ಬರು ಬಾಂಗ್ಲಾದೇಶಿಯರ ಹತ್ಯೆ

  300x250 AD


  ನವದೆಹಲಿ: ಪಶ್ಚಿಮ ಬಂಗಾಳದ ಕೂಚ್‍ಬೆಹರ್ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಯಲ್ಲಿ ಶುಕ್ರವಾರ ಮುಂಜಾನೆ ಇಬ್ಬರು ಗೋ ಕಳ್ಳ ಬಾಂಗ್ಲಾದೇಶಿಯರನ್ನು ಬಿಎಸ್‍ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

  ಬಾಂಗ್ಲಾದೇಶೀಯರು ದನಗಳನ್ನು ಕಳ್ಳಸಾಗಣೆ ಮಾಡುವುದನ್ನು ಬಿಎಸ್‍ಎಫ್ ಗಸ್ತು ದಳದ ಸಿಬ್ಬಂದಿ ತಡೆಯಲು ಪ್ರಯತ್ನಿಸಿದ್ದಾರೆ, ಈ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಬಿಎಸ್‍ಎಫ್ ಯೋಧರು ಗುಂಡಿಕ್ಕಿ ಇಬ್ಬರನ್ನು ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಘಟನೆಯಲ್ಲಿ ಓರ್ವ ಭಾರತೀಯ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೆÇಲೀಸರು ಹೇಳಿದ್ದಾರೆ.

  300x250 AD

  ಬಿಎಸ್‍ಎಫ್ ಸಿಬ್ಬಂದಿಯೂ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

  ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, 60 ಮಂದಿ ದುಷ್ಕರ್ಮಿಗಳ ತಂಡವು ದನಗಳನ್ನು ಕಳ್ಳಸಾಗಣೆ ಮಾಡಲು ಗಡಿಯ ಎರಡೂ ಬದಿಗಳಲ್ಲಿ ಜಮಾಯಿಸಿತ್ತು. ದುಷ್ಕರ್ಮಿಗಳು ಸುಧಾರಿತ ಬಿದಿರಿನ ಕ್ಯಾಂಟಿಲಿವರ್‍ಗಳನ್ನು ಮುಳ್ಳುತಂತಿಗಳ ಮೇಲೆ ಎಸೆದು ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top