ಯಲ್ಲಾಪುರ: ತಾಲೂಕಿನ ನಂದೊಳ್ಳಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕಲ್ಪ ಉತ್ಸವದ ಎರಡನೇ ಭಾಗವಾಗಿ ಯಕ್ಷ ಕಲಾ ಬಳಗದ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರಿಂದ ನಡೆದ ಕನ್ಯಾಂತರಂಗ ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ಶಂಕರ ಭಾಗ್ವತ, ಗಣಪತಿ ಭಾಗ್ವತ ಕವಾಳೆ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಎಲ್.ವಾಸುದೇವ ಭಟ್ಟ, ಪವನ ಕಿರಣಕೆರೆ, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ಮಹೇಶ ಭಟ್ಟ ಇಡಗುಂದಿ ಪಾತ್ರ ಚಿತ್ರಣ ನೀಡಿದರು.