ಕಾರವಾರ: ಪ್ರೀತಿಯ ನೆಪದಲ್ಲಿ ಹಾಗೂ ಮದುವೆಯಾಗುತ್ತೇನೆಂದು ನಂಬಿಸಿ ಬೆಳಗಾವಿಯಿಂದ ಗೋಕರ್ಣಕ್ಕೆ ಮಹಿಳೆಯೋರ್ವಳನ್ನು ಕರೆತಂದಿದ್ದ ವ್ಯಕ್ತಿಯೋರ್ವ ಆಕೆಯ ಬಳಿ ಇದ್ದ ಒಡವೆ, ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಗೋಕರ್ಣದ ಲಾಡ್ಜ್ ಒಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮದುವೆಯಾಗಿ ಗಂಡನಿಂದ ದೂರವಾಗಿರುವ ಬೆಳಗಾವಿಯ ಮಹಿಳೆಗೆ ವ್ಯಕ್ತಿಯೋರ್ವ ಪರಿಚಯನಾಗಿದ್ದ. ನಂತರದಲ್ಲಿ ಮಹಿಳೆ ಹಾಗೂ ಈ ವ್ಯಕ್ತಿಯ ಜೊತೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಕೆಲ ಕಾಲ ಮೊಬೈಲ್‍ನಲ್ಲೇ ಸಂಭಾಷಣೆ ಮುಂದುವರಿದು, ಹಲವು ಕಡೆಗಳಲ್ಲಿ ಜೊತೆಯಾಗಿ ಸುತ್ತಾಟ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಆ ವ್ಯಕ್ತಿ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಗೋಕರ್ಣಕ್ಕೆ ಹೋಗಿ ಬರೋಣವೆಂದು ಕರೆದಿದ್ದ. ಗೋಕರ್ಣದಲ್ಲಿ ಲಾಡ್ಜ್‍ನಲ್ಲಿ ರೂಮೊಂದನ್ನು ಪಡೆದು ತಂಗಿದ್ದ ವೇಳೆ ವ್ಯಕ್ತಿಯು ಅಮಲಾಗುವಂತೆ ಜ್ಯೂಸ್ ಅನ್ನು ಕೊಟ್ಟು, ಮಹಿಳೆಯ ಬ್ಯಾಗ್‍ನಲ್ಲಿದ್ದ ಸುಮಾರು 1.40 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ಸುಮಾರು 12 ಸಾವಿರ ರೂ. ಮೌಲ್ಯದ 3 ಗ್ರಾಂ ತೂಕದ ಕಿವಿಯ ರಿಂಗ್, 1200 ರೂಪಾಯಿಯ ಮೌಲ್ಯದ ನೋಕಿಯಾ ಮೊಬೈಲ್, 10 ಸಾವಿರ ರೂ. ಬೆಲೆಯ ರೆಡ್ ಮಿ ಮೊಬೈಲ್ ಮತ್ತು 15 ಸಾವಿರ ರೂ. ನಗದು ಹಣವನ್ನು ದೋಚಿಕೊಂಡು, ಸವಿತಾಗೆ ಗೊತ್ತಾಗದಂತೆ ಲಾಡ್ಜ್ ರೂಮಿಗೆ ಹೊರಗಡೆಯಿಂದ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೆÇಲೀಸರು ವ್ಯಕ್ತಿಯ ಗುರುತು ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ