ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಪ್ಪಾ ಗ್ರಾಮದಲ್ಲಿ ಬಡ ಕುಟುಂಬದ ಬಾಲಕನ ಎರಡೂ ಕಿಡ್ನಿಗಳು ವಿಫಲವಾಗಿ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದು ಚಿಕಿತ್ಸೆಗಾಗಿ ಬಾಲಕನಿಗೆ ಬೇಕಾಕಿದೆ ಸಹಾಯ ಹಸ್ತ.
ರಾಜೇಸಾಬ ಮುಲ್ಲಾನವರ ಮತ್ತು ಫರೀದಾಬಾನು ದಂಪತಿಯ ಪುತ್ರ ರಿಯಾಜ್. ಈ ದಂಪತಿಗೆ ಮೂರು ಪುತ್ರಿಯರು ಹಾಗೂ ಪುತ್ರ ರಿಯಾಜ್. ಈತನು ಪಟ್ಟಣದ ಲೊಯೋಲ ಕಾಲೇಜ್‍ನಲ್ಲಿ ದ್ವಿತಿಯ ಪಿಯುಸಿ ಓದುತ್ತಿದ್ದಾನೆ. ಕೆಲ ದಿನಗಳ ಹಿಂದೆ ಆರೋಗ್ಯದ ಸಮಸ್ಯೆಯಿಂದ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಈತನ ಎರಡೂ ಕಿಡ್ನಿಗಳು ವಿಫಲವಾದ ಬಗ್ಗೆ 2020 ಡಿಸೆಂಬರ ವೇಳೆಯಲ್ಲಿ ಚಿಕಿತ್ಸೆ ವೇಳೆ ತಿಳಿದು ಬಂದಿತ್ತು. ಆದರೆ ಕಿತ್ತು ತಿನ್ನುವ ಬಡತನದ ಈ ಸ್ಥಿತಿಯಲ್ಲಿ ಮಗನಿಗೆ ಚಿಕಿತ್ಸೆ ನೀಡಲಾಗದೆ ಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಅಂಗಲಾಚುವ ಸ್ಥಿತಿ ಬಡ ಕುಟುಂಬಕ್ಕೆ ನಿರ್ಮಾಣವಾಗಿತ್ತು.
ನಂತರ ಇವರ ಸ್ಥಿತಿ ನೋಡಿ ಕೆಲ ಟಿಬೇಟಿಯನ್ನರು, ಗ್ರಾಮದವರು ಮತ್ತು ದಾನಿಗಳು ಹಣದ ಸಹಾಯ ಮಾಡಿದ್ದರು ಅವರು ಮಾಡಿದ ಸಹಾಯದಿಂದ ಹಣದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗಾಗಿ ಪ್ರತಿ ವಾರದಲ್ಲಿ ಮೂರು ದಿನ ಹೋಗಿ ಬರುತ್ತಿದ್ದರು. ಒಂದು ಬಾರಿ ಹೋದರೆ 3000ರೂ ಚಿಕಿತ್ಸೆ ಖರ್ಚಾಗುತ್ತಿತ್ತು. ಹೀಗೆ ಸುಮಾರು ಐದಾರು ತಿಂಗಳದವರೆಗೆ ಹೋಗಿ ಬರುತ್ತಿದ್ದೇವು ನಂತರ ದಿನದಲ್ಲಿ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಮಾಡಿಸಿದ್ದೆವು ತನ್ನ ಮಗನ ಜೀವ ಉಳಿಸಲು ನನ್ನ ಹೆಂಡತಿ ತನ್ನ ಕಿಡ್ನಿ ನೀಡುತ್ತಿದ್ದಾಳೆ ಎಂದು ಬಾಲಕನ ತಂದೆ ರಾಜೇಸಾಬ ಹೇಳಿದರು.
ಪರಿ ಪರಿಯಾಗಿ ಕೇಳಿಕೊಂಡ ಫರೀದಾಬಾನು ಬಾಲಕನ ತಾಯಿ: ಈಗಾಗಲೇ ಅಲ್ಲಲ್ಲಿ ಸಾಲ ಮಾಡಿದ ಹಣ ಮತ್ತು ದಾನಿಗಳು ನೀಡಿದ ಲಕ್ಷಾಂತರ ರೂ. ಹಣ ಚಿಕಿತ್ಸೆಗಾಗಿಯೆ ಖರ್ಚಾಗಿದೆ. ನನ್ನ ಮಗನ ಜೀವ ಉಳಿಸಿಕೊಳ್ಳಲು ನನ್ನ ಜೀವ ಹೋದರೂ ಸರಿ ನನ್ನ ಕಿಡ್ನಿ ನನ್ನ ಮಗನಿಗೆ ನೀಡುತ್ತಿದ್ದೇನೆ. ಕಿಡ್ನಿ ಜೋಡಣೆಗೆ 7 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲಲ್ಲಿ ಸಾಲ ಮಾಡಿ ಸುಮಾರು 3 ಲಕ್ಷ ಹಣ ಜಮಾ ಮಾಡಿಕೊಂಡಿದ್ದೇವೆ. ಒಟ್ಟು ಹಣ ಜಮಾವಾದರೆ ಈ ತಿಂಗಳಿನಲ್ಲಿ ಆಪರೇಶನ ಮಾಡುತ್ತಾರೆ. ಆದರೆ ಉಳಿದ ಹಣವನ್ನು ಹೊಂದಿಸಲು ಪರದಾಡುತ್ತಿದ್ದೇವೆ. ದೊಡ್ಡ ಮೊತ್ತದ ಹಣ ಬೇಕಾಗಿರುವ ಕಾರಣ ದಯವಿಟ್ಟು ನನಗೆ ಇರುವ ಒಬ್ಬ ಮಗನನ್ನು ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ತಂದೆ-ತಾಯಿ ಹಾಗೂ ಮಗ ದಾನಿಗಳ ನೆರವು ಕೋರುತ್ತಿದ್ದಾರೆ. ಮಾಹಿತಿಗಾಗಿ ಮೊಬೈಲ್ ನಂ. : 9731842090ಗೆ ಸಂಪರ್ಕಿಸಬೇಕೆಂದು ಕೇಳಿಕೊಂಡಿದ್ದಾರೆ.