• Slide
    Slide
    Slide
    previous arrow
    next arrow
  • ನಿಷೇಧಿತ ಚೀನಾ ಆಪ್ ಬಳಸಿ ಜನತೆಗೆ ವಂಚನೆ; ಮುಂಡಗೋಡ ಟಿಬೇಟಿಯನ್’ನ ಇಬ್ಬರ ಬಂಧನ

    300x250 AD

    ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪ್ ಇಬ್ಬರು ಬೌದ್ಧ ಸನ್ಯಾಸಿಗಳಿಬ್ಬರನ್ನು ನಿಷೇಧಿತ ಚೀನಾ ಆಪ್ ಬಳಸಿ ಜನರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರ ಸೈಬರ್ ಪೊಲೀಸರು ಬಂಧಿಸಿದ್ದಾರೆ.


    ಟಿಬೆಟಿಯನ್ ಕ್ಯಾಂಪ್‌ನ ಲೊಬಾಸಾಂಗ್ ಸಾಂಗ್ಯೆ (24), ದಕಪ ಪುಂದೆ (40) ಎಂಬುವರು ಬಂಧಿತ ಬೌದ್ಧ ಸನ್ಯಾಸಿಳಾಗಿದ್ದಾರೆ. ಇವರಿಬ್ಬರನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಟಿಬೇಟಿಯನ್ನ ಸಿವಿಲೀಯನ್ ವ್ಯಕ್ತಿ ನಾಪತ್ತೆಯಾಗಿದ್ದು ಅವನ ಬಂಧಿಸಲು ಗುರುವಾರ ಸಂಜೆ ಮಂಗಳೂರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್‌ಐ ನೇತ್ರತ್ವದ ತಂಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿದ್ದು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.


    ಘಟನೆ ವಿವರ: ಮಂಗಳೂರಿನ ವ್ಯಕ್ತಿಯೊಬ್ಬರು ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡನ್ನು ಮೂರು ವ?ಗಳಿಂದ ಬಳಕೆ ಮಾಡುತ್ತಿದ್ದರು. ಆದರೆ ಸದ್ಯ ಆ ಕ್ರೆಡಿಟ್ ಕಾರ್ಡನ ಸೇವಾ ಶುಲ್ಕು ಆರು ಸಾವಿರ ರೂ. ಪಾವತಿಸಬೇಕಾಗಿರುವುದರಿಂದ ಕಾರ್ಡನ್ನು ಮಾರ್ಚ 23ರಂದು ಕ್ರೆಡಿಟ್ ಕಾರ್ಡನ್ನು ಅವರು ಬ್ಯಾಂಕ್‌ಗೆ ಒಪ್ಪಿಸಿದರು. ಆದರೆ ಮಾರ್ಚ 27ರಂದು ಅವರ ಖಾತೆಯಿಂದ ಈ ಮೂರು ಜನ ಟಿಬೆಟಿಯನ್ ಆರೋಪಿಗಳು ಒಂದು ಲಕ್ಷದ ಹನ್ನೇರಡು ಸಾವಿರ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿರುವುದು ಬ್ಯಾಂಕ್ ಸ್ಟೆಟ್‌ಮೆಂಟ್‌ನಲ್ಲಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ವ್ಯಕ್ತಿ ಮಂಗಳೂರ ಸೈಬರ ಕ್ರೈಂ ಸೆಂಟರ್‌ಗೆ ದೂರು ಸಲ್ಲಿಸಿದ್ದರು.

    300x250 AD


    ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಮೊಬೈಲ್ ವಿಕಿ ವ್ಯಾಲೇಟ್ ಆಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾದ ಫಿನ್ ಕೆರ್ ಸ್ಟಾಲ್ ಪೈನಾನ್ಸ ಬ್ಯಾಂಕ್‌ನಲ್ಲಿರುವ ಎರಡು ಖಾತೆಗಳಿಗೆ ಮತ್ತು ಆರೋಪಿ ಲೊಬಾಸಾಂಗ್ ಅವರ ಕೆನರಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆಸಿದ ಪೊಲೀಸರಿಗೆ ಮತ್ತೊಬ್ಬ ಆರೋಪಿ ದಕಪಾ ಪುಂದೆ ಚೀನಾದ ನಿ?ಧಿತ ಆಪ್‌ಗಳಾದ ವಿ.ಚಾಟ್, ರೆಡ್ ಪ್ಯಾಕ್ ಮುಂತಾದವುಗಳ ಮೂಲಕ ಹವಾಲಾ ರೀತಿಯಲ್ಲಿ ಹಣವನ್ನು ವರ್ಗಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.


    ಬಂಧಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರ 7ನೇ.ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ ಎನ್ನಲಾಗಿದೆ. ಇನ್ನೋಬ್ಬ ಆರೋಪಿಗಾಗಿ ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ನಲ್ಲಿ ಮಂಗಳೂರು ಸೈಬರ್ ಪೊಲೀಸರು ಬೀಡು ಬಿಟ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಆರೋಪಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top