ಮುಂಡಗೋಡ: ಭಾರತದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ನೆರೆವು ಅಭಿಯಾನವನ್ನು ತಾಲೂಕಿನ ಗುಂಜಾವತಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸೇವಾ ಸಮಿತಿಯವರು ಹಾಗೂ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೆÇಲಿಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟಿನೆ ಮಾಡಿ ಮಾತನಾಡಿದ ಸಿವಿಲ್ ನ್ಯಾಯಾಧೀಶ ಕೇಶವ ಕೆ. ಅವರು ಬುಡಕಟ್ಟು ಜನರ ಹಕ್ಕು ಜಾರಿ ಮತ್ತು ಸಂರಕ್ಷಣೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಗಳು ಹಾಗೂ ಮಕ್ಕಳನ್ನು ಹೇಗೆ ಬೆಳೆಸಬೇಕು ಹಾಗೂ ಅವರಿಗೆ ಉನ್ನತ ಶಿಕ್ಷಣವನ್ನು ಕೊಟ್ಟು ಮುಂದೆ ಉತ್ತಮ ಪ್ರಜೆಗಳಾನ್ನಾಗಿ ಮಾಡಬೇಕು ಎಂದರು.
ಪಿಎಸ್‍ಐ ಬಸವರಾಜ ಮಬನೂರು, ಸಿ.ಡಿ.ಪಿ.ಒ. ದೀಪಾ ಬಂಗೇರ, ಆರ್. ಎಮ್. ಮಳಗಿಕರ್, ಜಿ.ಆರ್. ಆಲದಕಟ್ಟಿ, ರಾಜೇಶ ಹುಬ್ಬಳ್ಳಿ, ರಾಜು ಹಂಚಿನಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.