ಶಿರಸಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಜಾರ್ಖಂಡ್ ಸಂಸದ ನಿಶಿಕಾಂತ ದುಬೆ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದು ತೀರಾ ಖಂಡನಿಯ ಮತ್ತು ಖೇಧನಿಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ದೀಪಕ್ ದೊಡ್ಡೂರ್ ಹೇಳಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರೊಬ್ಬರು, ಯಾವ ವೈಜ್ಞಾನಿಕ ಆಧಾರವು ಇಲ್ಲದೆ ಈ ರೀತಿ ಒಮ್ಮೆಲೇ ಪತ್ರ ಬರೆದಿರುವುದು ಬೇಜವಾಬ್ದಾರಿಯ ಪರಮಾವಧಿ ಎನ್ನಬೇಕು. ಅಡಿಕೆಯು ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳ ಲಕ್ಷಾಂತರ ಕುಟುಂಬಗಳಿಗೆ ಜೀವನಾಡಿ. ಅಡಿಕೆಯು ಕ್ಯಾನ್ಸರ್ ಕಾರಕ ಎಂದು ಎಲ್ಲೂ ಸಿದ್ದವಾಗಿಲ್ಲ. ಇಷ್ಟಕ್ಕೂ ಅದು ಹಲವಾರು ಬಗೆಯ ಔಷಧಿ ಗುಣವನ್ನು ಹೊಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಅಡಿಕೆಯಿಂದ ವೈವಿಧ್ಯಮಯವಾದ ಉತ್ಪನ್ನಗಳನ್ನು ಈಗಾಗಲೇ ತಯಾರಿಸುತ್ತಿದ್ದು, ಅದಕ್ಕೆ ಪ್ರೋತ್ಸಾಹ ಕೊಡುವ ಬದಲು ಈ ರೀತಿಯಲ್ಲಿ ಅಪಚಾರಕ್ಕೆ ತೊಡಗಿಸುವುದು ಖಂಡನೀಯವೇ ಸರಿ ಎಂದು ಹೇಳಿದ್ದಾರೆ.