ಸಿದ್ದಾಪುರ: ನೈತಿಕ ಪೊಲೀಸ್ ಗಿರಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿದ್ದಾಪುರ ಪೊಲೀಸ್ ಠಾಣೆ ಎದುರು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಠಾಣೆ ಎದುರು ಶಾಂತವಾಗಿ ಧರಣಿ ಕುಳಿತ ಕಾರ್ಯಕರ್ತರು ಕೆಲವರು ಕಾನೂನು ಮೀರಿ ತಮ್ಮ ಅನಿಸಿಕೆಯನ್ನು ಇನ್ನೊಬ್ಬರ ಮೇಲೆ ಹೇರುತ್ತಿದ್ದಾರೆ. ಆ ಮೂಲಕ ಮುಗ್ದರ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಇಂತಹಾ ನೈತಿಕ ಪೊಲೀಸ್ ಗಿರಿಯನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಇಸ್ಪೆಕ್ಟರ್ ಕೆ. ಕುಮಾರ ನಾವು ಇಂತಹಾ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ನೀವು ಪೆÇಲೀಸ್ ಠಾಣೆ ಎದುರು ಧರಣಿ ನಡೆಸಲು ಅವಕಾಶ ಇಲ್ಲ ಎಂದರು.
ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಾಗರಾಜ ನಾಯ್ಕ, ಕೃಷ್ಣ ಬಳೆಗಾರ, ಮಮತಾ ನಾಯ್ಕ, ಗೋವಿಂದಗೌಡ ಇತರರು ಇದ್ದರು.