ಶಿರಸಿ: ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸ್ಥಾಪಿಸಲಾದ ಡಿಜಿಟಲ್ ಕ್ಲಾಸ್‍ರೂಮ್‍ಗಳ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ಶಾಲೆಯ ವಿದ್ಯಾರ್ಥಿಗಳು ಶಿರಸಿಯ ಸಾಂಪ್ರದಾಯಿಕ ಬೇಡರ ವೇಷದ ಕಲೆಯ ಮೂಲಕ ಸ್ವಾಗತಿಸಿದರು. ಇನ್ನರ ವ್ಹೀಲ್ ಕ್ಲಬ್‍ನ ಜಿಲ್ಲಾಧ್ಯಾಕ್ಷರಾದ ರತ್ನಾ ಬೆಹೆರೆ ರವರು ಶಿರಸಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ತರಗತಿಗಳಿಗೆ ತೆರಳಿ ಡಿಜಿಟಲ್ ಕ್ಲಾಸ್ ಗಳನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಇನ್ನರ ವ್ಹೀಲ್ ಕ್ಲಬ್‍ನ ಜಿಲ್ಲಾಧ್ಯಾಕ್ಷ ರತ್ನಾ ಬೆಹೆರೆ ಜ್ಯೋತಿ ಬೆಳಗುವದರ ಮೂಲಕ ಉದ್ಘಾಟಿಸಿದರು. ಇನ್ನರ್ ವ್ಹೀಲ್ ಕ್ಲಬ್ ಶಿರಸಿ ಅಧ್ಕಕ್ಷರಾದ ಶ್ವೇತಾ ಪ್ರಭು ರವರು ಚಂದನ ಶಾಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಬರುವ ಕಾರಣ ಚಂದನ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವದಾಗಿ ತಿಳಿಸಿದರು. ಡಿಜಿಟಲ್ ಕ್ಲಾಸ್ ಗಳಿಗೆ 7 ಲಕ್ಷ ಖರ್ಚಾಗಿದ್ದು 5 ಲಕ್ಷ ಇನ್ನರ್ ವ್ಹೀಲ್ ಕ್ಲಬ್ ನಿಂದ ಹಾಗೂ 2 ಲಕ್ಷ ಶಾಲೆಯಿಂದ ನೀಡಲಾಗಿದೆ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಕಕ್ಷರಾದ ಶ್ವೇತಾ ಪ್ರಭು ಹಾಗೂ ರೋ. ರಾಮಚಂದ್ರ ಪ್ರಭು ದಂಪತಿಗಳನ್ನು ಸನ್ಮಾನಿಸಲಾಯಿತು. ಎ.ಜಿ. ರೋಟೋರಿಯನ್ ಡಾ. ಶಿವರಾಮ ಕೆ.ವಿ. ಇಂಡಿಯಾ ಲಿಟರಸಿ ಪ್ರೋಜೆಕ್ಟ್‍ನ್ನು ವಿವರಿಸಿ ಶಾಲೆಗೆ ಹಸ್ತಾಂತರಿಸಿದರು. ಇದೆ ರೀತಿ ನೂರು ಶಾಲೆಗಳಿಗೆ ನೀಡಲಾಗಿದೆ ಎಂದರು. ಇದರಲ್ಲಿ ಮುಖ್ಯವಾಗಿ ಜೀವಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಉಪಕರಣಗಳು ವಿದ್ಯಾಥಿಗಳಿಗೆ ಪ್ರಯೋಜನಕಾರಿ ಎಂದರು. 4ನೇ ತರಗತಿಯಿಂದ 10ನೇ ತರಗತಿಯವರಗಿನ ವಿದ್ಯಾರ್ಥಿಗಳಿಗೆ ಉಪಯೊಗವಾಗುವಂತಹ ಎಲ್ಲಾ ವಿಷಯಗಳುಳ್ಳ ಪೆನ್ ಡ್ರೈವನ್ನು ಶಾಲೆಗೆ ನೀಡಿದರು. ಶಿರಸಿ ರೋಟರಿ ಅಧ್ಕಕ್ಷರಾದ ಪಾಂಡುರಂಗ ಪೈರವರು ಹಾವು ಏಣಿ ಆಟದ ವಾಲ್ಯೂ ಗೇಮ್ ಕಿಟ್ಟನ್ನು ಚಂದನ ಬಾಲವಾಡಿಗೆ ನೀಡಿದರು. ನಂತರ ಇನ್ನರ್ ವ್ಹೀಲ್ ಕ್ಲಬ್‍ನವರಿಗೆ ಅಭಿನಂದನೆ ಸಲ್ಲಿಸುತ್ತಾ, ಅತ್ಯಂತ ಮುಂದುವರಿಯುತ್ತಿರುವ ಭಾರತ ದೇಶವನ್ನು ರೋಟರಿ ಇಂಡಿಯಾ ಲಿಟರಸಿ ಮಿಷನ್ ಮೂಲಕ ಸಂರ್ಪೂಣ ಸಾಕ್ಷರ ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎಂದರು. ಶಿಕ್ಷಕಿ ದಿವ್ಯಾ ಹೆಗಡೆ ಡಿಜಿಟಲ್ ಕ್ಲಾಸ್‍ರೂಮ್‍ಗಳಿಂದ ಪರಿಣಾಮಕಾರಿ ಬೋಧನೆಗೆ ಸಹಾಯಕಾರಿಯಾಗಿದೆ ಎಂದರು.
ವಿದ್ಯಾರ್ಥಿನಿ ಶ್ರೇಯಾ ಭಟ್ಟ ಡಿಜಿಟಲ್ ಕ್ಲಾಸ್ ನಿಂದಾಗಿ ಆಸಕ್ತಿಯಿಂದ ಕಲಿಯಲು ಸಹಕಾರಿಯಾಗಿದೆ ಎಂದರು. ಹಾಗೂ ಇನ್ನರ್ ವ್ಹೀಲ್ ಕ್ಲಬ್ ಶಿರಸಿ ಇವರಿಗೆ ಅಭಿನಂದನೆ ಸಲ್ಲಿಸಿದರು. ಮಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ನರ ವ್ಹೀಲ್ ಕ್ಲಬ್‍ನ ಜಿಲ್ಲಾಧ್ಯಾಕ್ಷರಾದ ರತ್ನಾ ಬೆಹೆರೆ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರ ಎಲ್ಲರ ಶ್ರಮದಿಂದ ನಿಮಗೆ ಸಿಕ್ಕಿರುವ ಅವಕಾಶವನ್ನು ಸದೂಪಯೋಗ ಪಡಿಸಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು. ಹಾಗೂ ಡಿಜಿಟಲ್ ಕ್ಲಾಸ್ ಉದ್ಘಾಟಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಕಾರ್ಯದರ್ಶಿ ಎಲ್.ಎಮ್. ಹೆಗಡೆ ಸ್ವಾಗತಿಸಿದರು. ಇನ್ನರ್ ವ್ಹೀಲ್ ಕ್ಲಬ್ ಶಿರಸಿಯ ಮಾಧುರಿ ಶಿವರಾಮ್ ಅವರು ನಿರೂಪಿಸಿದರು. ಶಾಲಾ ಆಡಳಿತಾಧಿಕಾರಿಣಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಶಿರಸಿಯ ವಿದ್ಯಾ ನಾಯ್ಕ ರತ್ನಾ ಬೆಹೆರೆರವರನ್ನು ಪರಿಚಯಿಸಿದರು. ಇನ್ನರ್ ವ್ಹೀಲ್ ಕ್ಲಬ್ ಶಿರಸಿಯ ಸಂಧ್ಯಾ ನಾಯ್ಕ, ಶ್ವೇತಾ ಪ್ರಭು ಅವರನ್ನು ಪರಿಚಯಿಸಿದರು. ಮಿಯಾಡ್ರ್ಸ ಸದಸ್ಯ ಸತೀಶ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಶಿರಸಿ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು, ಹಿತೈಷಿಗಳು, ಮಿಯಾಡ್ರ್ಸ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಮಹಿಳಾ ಸಬಲೀಕರಣದ ಕುರಿತು ನೃತ್ಯ ಪ್ರದರ್ಶನ ನೀಡಿದರು.