ಜೋಯಿಡಾ: ತಾಲೂಕಾ ಕೇಂದ್ರದ ಶಿವಾಜಿ ವೃತ್ತದಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವುದನ್ನ ತಪ್ಪಿಸುವಂತೆ ಕೋರಿ ಗಾಂಗೋಡಾ ಗ್ರಾ.ಪಂ ಅಧ್ಯಕ್ಷ ಸುಬ್ರಾಯ ಭಟ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಶಿವಾಜಿ ವೃತ್ತವು ಬೇಕಾಬಿಟ್ಟಿ ವಾಹನ ನಿಲುಗಡೆಯ ತಾಣವಾಗಿದೆ. ಇದು ರಾಜ್ಯ ಹೆದ್ದಾರಿಗೆ ತಾಗಿಯೇ ಇರುವ ಪ್ರಮುಖ ವೃತ್ತ. ಈ ವೃತ್ತದ ಮೂಲಕವೇ ತಾಲೂಕಾ ಕೇಂದ್ರದ ಮುಖ್ಯ ಕಚೇರಿಗೆ ಬರಬೇಕು. ಕೇಂದ್ರ ಬಸ್ ನಿಲ್ದಾಣಕ್ಕೂ ಇದೇ ವೃತ್ತದ ಮೂಲಕ ಹಾದು ಬರಬೇಕು. ಕಾರವಾರ, ಕುಂಬಾರವಾಡ, ಉಳವಿ ಮಾರ್ಗಗಳಿಗೆ ಹೋಗುವ ವಾಹನಗಳೂ ಇಲ್ಲಿ ನಿಲ್ಲುವುದರಿಂದ ಈ ವೃತ್ತದಲ್ಲಿ ವಾಹನಗಳನ್ನು ಶಿಸ್ತುಬದ್ಧವಾಗಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಇಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.