ಶಿರಸಿ: ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಆವಾರದಲ್ಲಿ ನ.13 ಶನಿವಾರ ಮಧ್ಯಾಹ್ನ 3 ಗಂಟೆಗೆ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕರೆಯಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯು 2020-21 ನೇ ಆರ್ಥಿಕ ವರ್ಷದಲ್ಲಿ ರೂ.17,49,375/-ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು ರೂ.34.10 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ. ಸದಸ್ಯರ ಪಾಲು ಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಶಿಫಾರಸ್ಸು ಮಾಡಿದೆ.
ಯಲ್ಲಾಪುರ ಮತ್ತು ಜೋಯಿಡಾ ಭಾಗದ ಸದಸ್ಯರಿಗಾಗಿ ನ.12 ರಂದು ಮಧ್ಯಾಹ್ನ 4 ಘಂಟೆಗೆ ಯಲ್ಲಾಪುರ ಎಪಿಎಂಸಿ ಆವರಣದಲ್ಲಿರುವ ಕದಂಬ ಮಾರ್ಕೆಟಿಂಗ್ ನಲ್ಲಿ ಪ್ರಾದೇಶಿಕ ಸಭೆ ಕರೆಯಲಾಗಿದೆ. ಸಂಸ್ಥೆಯ ಎಲ್ಲ ಸದಸ್ಯರು ಹಾಜರಿದ್ದು ಸೂಕ್ತ ಸಲಹೆ ಸೂಚನೆ ನೀಡಲು ಪ್ರಕಟಣೆಯಲ್ಲಿ ಕೋರಲಾಗಿದೆ.