• first
    second
    third
    previous arrow
    next arrow
  • ಎಂ.ಕಾಂ ಫಲಿತಾಂಶ ಪ್ರಕಟ; MES ವಾಣಿಜ್ಯ ಕಾಲೇಜು ಶೇ. 100 ಫಲಿತಾಂಶ

    300x250 AD

    ಶಿರಸಿ: ಸಪ್ಟೆಂಬರ್ 2021 ರಲ್ಲಿ ಜರುಗಿದ ಎಂ.ಕಾಂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ ಶೇಕಡಾ 100% ಆಗಿರುತ್ತದೆ.


    ಪರೀಕ್ಷೆಗೆ ಒಟ್ಟೂ 41 ವಿದ್ಯಾರ್ಥಿಗಳು ಕುಳಿತಿದ್ದು 3 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 38 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿಗೆ ಭಾರ್ಗವಿ ಬಿ.ಎಚ್ (GPA 7.74) ಪ್ರಥಮ ಸ್ಥಾನ, ಸ್ವಾತಿ ಉದಯ ಕಾಮತ (GPA 7.71) ದ್ವಿತೀಯ ಸ್ಥಾನ, ಚಂದನಾ ಗಜಾನನ ಹೆಗಡೆ (GPA 7.57) ತೃತೀಯ ಸ್ಥಾನ ಪಡೆದಿದ್ದಾರೆ.

    300x250 AD


    ಕಳೆದ 8 ವರ್ಷಗಳಿಂದ ಸತತವಾಗಿ ಕಾಲೇಜಿನ ಎಂಕಾಂ ವಿಭಾಗವು ಪ್ರತಿಶತ 100% ಸಾಧನೆಯನ್ನು ಮಾಡುತ್ತಾ ಬಂದಿರುತ್ತದೆ. ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಎಂ.ಇ.ಎಸ್ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಮಹಾವಿದ್ಯಾಲಯದ ಉಪಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top