ಗೋಕರ್ಣ: ಕಾರವಾರದ ಮಾಲಾದೇವಿ ಮೈದಾನದಲ್ಲಿ ಬುಧವಾರದಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಇವರು ಆಯೋಜಿಸಿದ ಕ್ರೀಡಾಕೂಟದಲ್ಲಿ ಮೊಡರ್ನ ಎಜ್ಯುಕೇಶನ್ ಗೋಕರ್ಣ ಶಾಲೆಯ ವಿದ್ಯಾರ್ಥಿ ಗಣೇಶ ಮದನ ನಾಯಕ ಇವನು 16 ವರ್ಷ ವಯೋಮಿತಿಯೊಳಗಿನ ಗುಂಡು ಎಸೆತ ಸ್ಪರ್ಧೆಯಲ್ಲಿ 13.30 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾನೆ.
ಈತನ ಸಾಧನೆಗೆ ಸ್ಪೂರ್ತಿಯಾದ ಶಾಲೆಯ ದೈಹಿಕ ಶಿಕ್ಷಕ ನಿತ್ಯಾನಂದರವರ ಪ್ರರಿಶ್ರಮದಿಂದ ಮುಂದೆ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾನೆ. ವಿಜೇತನಾದ ಈ ವಿದ್ಯಾರ್ಥಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಂತೋಷ ಅರ್ ನಾಯಕ ತೊರ್ಕೆ, ಉಪಾಧ್ಯಕ್ಷ ನಾಗೇಂದ್ರ ಶೇಟ್, ಮೆನೆಜಿಂಗ್ ಟ್ರಸ್ಟಿ ಡಾ.ಎಂ.ಡಿ.ನಾಯ್ಕ, ಅಕಾಡೆಮಿಕ್ ಡೈರೆಕ್ಟರ್ ಮಂಜು ಹಿತ್ತಲ್ಮಕ್ಕಿ, ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೊನ್ಸಾಲಿಸ್, ಹಾಗೂ ಶಿಕ್ಷಕವೃಂದ, ಊರ ನಾಗರಿಕರು ಅಭಿನಂದನೆ ಸಲ್ಲಿಸಿರುತ್ತಾರೆ.