• first
    second
    third
    previous arrow
    next arrow
  • ಶಿರಸಿ ಟಿಎಂಎಸ್ ಸಂಘಕ್ಕೆ 6ಕೋಟಿ ನಿರ್ವಹಣಾ ಪೂರ್ವ ಲಾಭ; ನ.13ಕ್ಕೆ ವಾರ್ಷಿಕ ಸಭೆ

    300x250 AD


    ಶಿರಸಿ: ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿಯು 37 ವರ್ಷಗಳನ್ನು ಪೂರ್ಣಗೊಳಿಸಿ 38ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ಪ್ರಗತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 2020-21ನೇ ಸಾಲಿನಲ್ಲಿ ಸಂಘದಲ್ಲಿ 15908 ಕ್ವಿಂಟಲ್ ಹಸಿ ಅಡಿಕೆ ವಿಕ್ರಿ ಸಹಿತ ಅಂತೂ 77309 ಕ್ವಿಂಟಲ್ ಮಹಸೂಲು ವಿಕ್ರಿಮಾಡಿದ್ದು ಸಂಘದ ವಹಿವಾಟು ರೂ.286 ಕೋಟಿಗೂ ಹಾಗೂ ದುಡಿಯುವ ಬಂಡವಾಳ ರೂ.148.00 ಕೋಟಿಗೂ ಅಧಿಕವಾಗಿದೆ. ಸ್ವಂತ ಬಂಡವಾಳ ರೂ.3599.77 ಲಕ್ಷಗಳಿಗೆ ತಲುಪಿದೆ. ಠೇವಣಿ ರೂ.67.00 ಕೋಟಿಗೂ ಅಧಿಕವಾಗಿದೆ.

    ನೇರ ಖರೀದಿ ವಿಭಾಗದಲ್ಲಿ 15012.39 ಕ್ವಿಂಟಲ್ ಅಡಿಕೆ ಹಾಗೂ ಕಾಳುಮೆಣಸು ಖರೀದಿ-ವಿಕ್ರಿಯಿಂದ ರೂ.44 ಕೋಟಿ 66 ಲಕ್ಷಗಳ ವ್ಯವಹಾರ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉಪಕರಣ ಸೇರಿ ರೂ.10 ಕೋಟಿ 63 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ಬನವಾಸಿ ಶಾಖೆಯಲ್ಲೂ ಸಹ ರೂ.5 ಕೋಟಿ 57 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ದಾಸನಕೊಪ್ಪ ಶಾಖೆಯಲ್ಲಿ 3 ಕೋಟಿ 87 ಲಕ್ಷದ ವಿಕ್ರಿ ವ್ಯವಹಾರ ಮಾಡಲಾಗಿದೆ. 2020-2021ರಲ್ಲಿ ಗಳಿಸಿದ ಲಾಭದಲ್ಲಿ ಸದಸ್ಯರಿಗೆ ಹಾಗೂ ಸದಸ್ಯ ಸಂಘಗಳಿಗೆ ರೂ. 1,07,05,215.00 ರಿಬೇಟ ನೀಡಿದ ಬಳಿಕ ಉಪನಿಯಮದಲ್ಲಿರುವ ಅವಕಾಶದಂತೆ ನಿಧಿಗಳಿಗೆ ಅನುವು ಮಾಡಿದ ಬಳಿಕ ನಿಕ್ಕೀ ರೂ. 1,04,24,104 ಗಳಷ್ಟು ಲಾಭ ಗಳಿಸಲಾಗಿದೆ.

    ವರದಿಯ ವರ್ಷದ ಅಂತ್ಯಕ್ಕೆ 20 “ಅ” ವರ್ಗದ ಸದಸ್ಯರು, 1703 “ಬ” ವರ್ಗದ ಸದಸ್ಯರು ಹಾಗೂ 12934 “ಕ” ವರ್ಗದ ಸದಸ್ಯರನ್ನು ಹೊಂದಿದೆ. ಸಂಘದಲ್ಲಿ ಸದಸ್ಯರ ಶೇರು ಬಂಡವಾಳ ರೂ.44,83,900 ಇರುತ್ತಿದ್ದು, ಸದಸ್ಯರ ಠೇವು ರೂ.67,79,44,655 ಗಳಷ್ಟಿದೆ. ಸಂಘವು ರೂ.52,74,67,592.00 ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಶೇರು/ಠೇವುಗಳಲ್ಲಿ ಗುಂತಾವಣೆ ಮಾಡಿದೆ. ವರದಿ ವರ್ಷದಲ್ಲಿ ಸಂಘದ ನಿಧಿಗಳು ರೂ.4,17,82,550/-ಗಳಷ್ಟು ಹೆಚ್ಚಳವಾಗಿದ್ದು ವರದಿ ಸಾಲಿನ ಲಾಭ ವಿಭಾಗಣೆ ಬಳಿಕ ಸಂಘದ ಸ್ವಂತ ನಿಧಿಗಳು ರೂ.36,72,48,410/-ಗಳಷ್ಟು ಆಗಲಿದೆ.


    ಸಂಘವು ವರದಿ ಸಾಲಿನ ಅಂತ್ಯಕ್ಕೆ ಕೆ.ಡಿ.ಸಿ.ಸಿ.ಬ್ಯಾಂಕಿಂದ ಪಡೆದ ಓ.ಡಿ.ಸಾಲದ ಬಾಬ್ತು ಯಾವುದೇ ಸಾಲ ಬಾಕಿ ಇರುವುದಿಲ್ಲ ಸದಸ್ಯರಿಂದ ಹಾಗೂ ಖರೀದಿದಾರರ ಖಾತೆ ಬಾಕಿ ಸೇರಿ ಅಂತೂ ರೂ. 60,64,81,748/- ಸಾಲ ಬಾಕಿ ಬರತಕ್ಕದ್ದಿದೆ. ಸಂಘದ ದಲಾಲಿ ವಿಭಾಗದಲ್ಲಿ ಅಂತೂ 205,38,79,602/-ಗಳಷ್ಟು ವ್ಯವಹಾರ ಮಾಡಲಾಗಿದ್ದು 77,390 ಕ್ವಿಂಟಲ್ ಮಹಸೂಲು ಮಾರಾಟ ಮಾಡಲಾಗಿದೆ ಸದಸ್ಯರ ಮಹಸೂಲು ವಿಕ್ರಿ ಆಧಾರದ ಮೇಲೆ ಕ್ವಿಂಟಲ್ಲಿಗೆ ರೂ.50/-ರಂತೆ ಸಾಗಾಣಿಕಾ ಸಹಾಯಧನ ನೀಡುತ್ತಿದ್ದು, 2020-21ನೇ ಸಾಲಿನಲ್ಲಿ ನೀಡಿದ ಅಂತೂ ರಕಂ ರೂ.52,81,412/- ಗಳಷ್ಟಾಗಿದೆ. ಹಾಗೇ ಸದಸ್ಯ ಸಂಘಗಳಿಗೆ ಸಹ ಅವರ ಮಹಸೂಲು ವಿಕ್ರಿ ಪ್ರಮಾಣಕ್ಕನುಸರಿಸಿ ಪ್ರೋತ್ಸಾಹಧನ ನೀಡಿದ್ದು ಈ ರೀತಿ ನೀಡಿದ ರಕಂ ರೂ.54,23,803.00 ಗಳಷ್ಟಾಗಿದೆ. ಸದಸ್ಯರಿಗೆ ಹಾಗೂ ಸದಸ್ಯ ಸಂಘಗಳಿಗೆ 2020-21ನೇ ಸಾಲಿನಲ್ಲಿ ನೀಡಿದ ಅಂತೂ ಪ್ರೋತ್ಸಾಹಧನ ರಕಂ ರೂ.107,05,215.00 ಗಳಷ್ಟಾಗಿರುತ್ತದೆ. ಮಾರ್ಚ 31ಕ್ಕೆ ಮುಗಿದ ವರ್ಷದಲ್ಲಿ ಉತ್ತಮ ಲಾಭಗಳಿಸಿರುವದರಿಂದ ಸದಸ್ಯರಿಗೆ ಹೆಚ್ಚುವರಿಯಾಗಿ ಅಂತೂ ರೂ.15,69,062.ಗಳಷ್ಟು ರಕಂನ್ನು ಸದಸ್ಯರಿಗೆ ವಿಕ್ರಿ ಆದಾರದ ಮೇಲೆ ಸಹಾಯಧನ ರಕಂ ನೀಡುತ್ತಿದ್ದು ಈ ಬಾಬ್ತು ರಕಂನ್ನು ಸುಪರ್ ಮಾರ್ಟಿನಲ್ಲಿ ಸಾಮಾನು ಖರೀದಿಗೆ ‘ರಿಬೇಟ್ ಕೂಪನ್’ ರೂಪದಲ್ಲಿ ನೀಡಲಾಗುತ್ತಿದೆ. ಹಾಗೂ ಶೇರು ಸದಸ್ಯರಿಗೆ ಸರ್ವಸಾದಾರಣ ಸಭೆಯ ಕಾಲಕ್ಕೆ ಕಿರು ಕಾಣಿಕೆ ನೀಡಲು ನಿರ್ಣಯಿಸಲಾಗಿದೆ.


    ಸಂಘವು ಟೆಂಡರಿನಲ್ಲಿ ಭಾಗವಹಿಸಿ ರೈತರ ಮಹಸೂಲನ್ನು ಖರೀದಿಸಿ ಮಾರಾಟ ಮಾಡುತ್ತಿದ್ದು ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗಲು ಸಾಧ್ಯವಾಗಿದೆ. ವರದಿ ಸಾಲಿನಲ್ಲಿ 15012 ಕ್ವಿಂಟಲ್‍ಗಳಷ್ಟು ಅಡಿಕೆಯನ್ನು ಟೆಂಡರಿನಲ್ಲಿ ಖರೀದಿಸಿ ಗ್ರೇಡಿಂಗ್ ಮಾಡಿ ಸಂಘದ ಬ್ರಾಂಡಿನಲ್ಲಿ ಮಾರಾಟ ಮಾಡಲಾಗಿದೆ. ಕೆಂಪಡಿಕೆ ಹಾಗೂ ಕಾಳುಮೆಣಸನ್ನು ಸಹ ಟೆಂಡರಿನಲ್ಲಿ ಖರೀದಿಸಿ ಸಂಘದ ಮಾರ್ಕಿನಲ್ಲಿ ವಿಕ್ರಿ ಮಾಡಲಾಗುತ್ತಿದೆ.

    300x250 AD


    ಸಂಘದ 2020-21ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಮೆ. ಉದಯ ಶೆಟ್ಟಿ & ಕಂ.ಚಾರ್ಟಡ್ರ್ ಅಕೌಂಟಂಟ್ಸ್, ಹುಬ್ಬಳ್ಳಿ ಇವರು ದಿ:09-09-2021ರಂದು ಮುಕ್ತಾಯಗೊಳಿಸಿ ವರದಿ ನೀಡಿರುತ್ತಾರೆ. ಅಡಿಟ್ ವರ್ಗೀಕರಣ “ಅ” ವರ್ಗದಲ್ಲಿ ಮುಂದುವರಿದಿರುತ್ತದೆ.
    2020-21ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ.15% ಡಿವಿಡೆಂಡ್ ಹಂಚಿಕೆ ಮಾಡಲು ನಿರ್ಣಯಿಸಲಾಗಿದೆ.
    ಹಸಿ ಅಡಿಕೆ ಟೆಂಡರ್: ಕೂಲಿ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಅಡಿಕೆ ಕೊಯ್ದು ಮಾರುಕಟ್ಟೆಗೆ ಸಿದ್ದಪಡಿಸಿ ತರುವಲ್ಲಿ ತೊಂದರೆಯಾಗುತ್ತಿರುವದರಿಂದ ಹಸಿ ಅಡಿಕೆ ಟೆಂಡರ್ ವ್ಯವಹಾರವನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತ ಬಂದಿದ್ದು ಕೊನೆ ಕೊಯ್ಲಿನ ಹಂಗಾಮಿನಲ್ಲಿ ಪ್ರತಿ ದಿನ ಹಸಿ ಅಡಿಕೆ ಟೆಂಡರ್ ನಡೆಸಲಾಗುತ್ತಿದೆ. 2020-21 ರಲ್ಲಿ 15908 ಕ್ವಿಂಟಲ್ ಹಸಿ ಅಡಿಕೆ ಟೆಂಡರ್‍ನಲ್ಲಿ ವಿಕ್ರಿ ಮಾಡಲಾಗಿದೆ.


    ಟ.ಎಂ.ಎಸ್.ಆರೋಗ್ಯ ಸುರಕ್ಷಾ ಯೋಜನೆ :- ಸಂಘದಲ್ಲಿ ನೇರವಾಗಿ ಅಥವಾ ಪ್ರಾಥಮಿಕ ಸಂಘದ ಮೂಲಕ ಮಹಸೂಲು ವಿಕ್ರಯಿಸುವ ಸದಸ್ಯರು ಹಾಗೂ ಸದಸ್ಯರ ಕುಟುಂಬದ ಮೆಂಬರರಿಗೆ ಅನಾರೋಗ್ಯ ಉಂಟಾದಲ್ಲಿ ಅಥವಾ ಅಪÀಘಾತವಾದ ಸಂದರ್ಭದಲ್ಲಿ ಆಸ್ಪತ್ರೆ ಖರ್ಚುವೆಚ್ಚ ಭರಿಸಲು ಧನ ಸಹಾಯ ನೀಡುವ ಯೋಜನೆಯನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಅನುಸರಿಸಿಕೊಂಡು ಬರಲಾಗಿದೆ. ರಾಜ್ಯ ಸರಕಾರವು ‘ಯಶಸ್ವಿನಿ’ ಯೋಜನೆಯನ್ನು ಸ್ಥಗಿತಗೊಳಿಸಿದ ಬಳಿಕ ಸಂಘದಲ್ಲಿ ವ್ಯವಹರಿಸುವ ಸದಸ್ಯರ ಅನಾರೋಗ್ಯ ಸಂದರ್ಭದಲ್ಲಿ ಆಸ್ಪತ್ರೆ ಖರ್ಚುವೆಚ್ಚ ಭರಿಸಲು ತೊಂದರೆಯಾಗುತ್ತಿರುವದನ್ನು ಮನಗಂಡು ಸಂಘವು ಯಶಸ್ವಿನಿ ಯೋಜನೆಯ ಮಾದರಿಯಲ್ಲಿಯೇ ‘ಟಿ.ಎಂ.ಎಸ್. ಆರೋಗ್ಯ ವಿಮೆ’ ಯೋಜನೆಯನ್ನು 2018ರಿಂದಲೇ ಪ್ರಾರಂಭಿಸಿದ್ದು, ಈ ಯೋಜನೆಯ ಮೂಲಕ 2020-21ನೇ ವರ್ಷದಲ್ಲಿ 201 ಜನ ಸದಸ್ಯರಿಗೆ ರೂ.34,96,200.00 ಗಳಷ್ಟು ಧನ ಸಹಾಯ ನೀಡಲಾಗಿದೆ.
    ನಮ್ಮ ಸಂಘದಲ್ಲಿ ನೇರವಾಗಿ ಅಥವಾ ಪ್ರಾಥಮಿಕ ಸಂಘದ ಮೂಲಕ ಮಹಸೂಲು ವಿಕ್ರಿಮಾಡುವ ಎಲ್ಲರನ್ನೂ ಸಹ ಈ ಯೋಜನೆಯ ವ್ಯಾಪ್ತಿಗೊಳಪಡಿಸುವ ಸಲುವಾಗಿ ನೇರವಾಗಿ ಅಥವಾ ಪ್ರಾಥಮಿಕ ಸಂಘದ ಮೂಲಕ ಮಹಸೂಲು ವಿಕ್ರಿ ಮಾಡುವ ಸದಸ್ಯರ ಖಾತೆಗೆ ಪ್ರಿಮಿಯಂ ರಕಂ ಖರ್ಚು ಹಾಕಿ ಈ ಯೋಜನೆಗೆ ಒಳಪಡಿಸಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಅನಾರೋಗ್ಯ ಅಥವಾ ಅಪಘಾತಕ್ಕೆ ಸಂಬಂದಿಸಿ ಆಸ್ಪತ್ರೆ ಖರ್ಚುವೆಚ್ಚದ ಬಿಲ್ಲಿನ ಶೇ.50 ರಷ್ಟು ಗರಿಷ್ಠ ಒಂದು ಕುಟುಂಭಕ್ಕೆ ರೂ.1,00,000/- ಈ ಯೋಜನೆಯ ಮೂಲಕ ಧನ ಸಹಾಯ ನೀಡಲಾಗುತ್ತಿದೆ.

    ‘ವಿನಾ ದೈನ್ಯೇನ ಜೀವನಂ’ ಎಂಬುದು ಸಂಘದ ಧ್ಯೇಯವಾಕ್ಯವಾಗಿದ್ದು ನಮ್ಮ ಸಂಘದಲ್ಲಿ ವ್ಯವಹರಿಸುವ ಎಲ್ಲ ಸದಸ್ಯರು ಆರ್ಥಿಕವಾಗಿ ಉತ್ತಮವಾಗಿ ಜೀವನ ನಡೆಸಲು ಪೂರಕವಾದ ಕಾರ್ಯವನ್ನು ಸಂಘದಿಂದ ಮಾಡುತ್ತ ಬರಲಾಗಿದೆ. ನಾವು ಅಡಿಕೆ ಬೆಳೆಯೊಂದಿಗೆ ಕಾಳುಮೆಣಸು, ಯಾಲಕ್ಕಿ, ವೆನಿಲ್ಲಾ, ಕೋಕೊ, ಕಾಫಿಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. 

    ಸಂಘದಲ್ಲಿ ಲಭ್ಯವಿರುವ ಸೇವಾ ಸೌಲಭ್ಯಗಳು:
    *.ಮಹಸೂಲು ಶಿಲ್ಕು ಇಡುವ ಬಗ್ಗೆ ಸುಸಜ್ಜಿತ ಗುದಾಮ ವ್ಯವಸ್ಥೆ. ಶಿಲ್ಕು ಇರುವ ಮಹಸೂಲು ಹಾಳಾಗದಂತೆ ಇಡಲು ದುವಾ ಹಾಗೂ ಫ್ಯುಮಿಗೇಶನ್ ವ್ಯವಸ್ಥೆ. ಅಡಿಕೆ ಆರಿಸಿಕೊಡುವ ವ್ಯವಸ್ಥೆ, ತ್ವರಿತ ಹಾಗೂ ಪಾರದರ್ಶಕ ವ್ಯವಹಾರ
    * ಸದಸ್ಯರ ದೈನಂದಿನ ಅಗತ್ಯತೆಗೆ ಬೇಕಾದ ದಿನಸಿ ಸಾಮಾನು, ಸ್ಟೇಶನರಿ ಸಾಮಾನು, ಹಣ್ಣು,ತರಕಾರಿ,ಹಾಲು ಹಾಗೂ ಪಾತ್ರೆ, ವಿದ್ಯಾರ್ಥಿಗಳಿಗೆ ಬೇಕಾಗುವ ಪೆನ್ನು, ಪೆನ್ಸಿಲ್ ನೋಟ್ ಬುಕ್,ಪೇಪರ್ ಇತ್ಯಾದಿ ಸಾಮಾನುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುವ ಯೋಜನೆಯೊಂದಿಗೆ ‘ಸುಪರ್ ಮಾರ್ಟ’ ವಿಭಾಗ ಪ್ರಾರಂಭಿಸಲಾಗಿದೆ.
    * ಮಹಸೂಲು ವಿಕ್ರಿ ಆಧಾರದ ಮೇಲೆ ಮೆಂಬರರಿಗೆ ರಿಬೇಟ ನೀಡಲಾಗುತ್ತಿದೆ.
    * ಮೆಂಬರರ ಅಥವಾ ಅವರ ಕುಟುಂಬದ ಸದಸ್ಯರಿಗೆ ಅನಾರೋಗ್ಯವಾದಲ್ಲಿ “ಆರೋಗ್ಯ ಸುರಕ್ಷಾ ಯೋಜನೆ” ಯಿಂದ ಧನ ಸಹಾಯ.
    * “ಅಪಘಾತ ವಿಮೆ ಯೋಜನೆ:- ಸದಸ್ಯರು ಅಥವಾ ಸದಸ್ಯರ ಹೊಲದಲ್ಲಿ ಕೆಲಸಮಾಡುವ ವಿಶೇಷವಾಗಿ ಕೊನೆ ಗೌಡರಿಗೆ, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಾಗ ಅಪಘಾತವಾದಲ್ಲಿ, ಅಪಘಾತದ ಚಿಕಿತ್ಸೆಗೆ ರೂ.50,000/-ಗಳವರೆಗೆ ಹಾಗೂ ಮೃತರಾದಲ್ಲಿ ರೂ.25,000/- ಧನ ಸಹಾಯ ನೀಡುವ ಯೋಜನೆ. ಈ ಬಗ್ಗೆ ಸದಸ್ಯರಿಗೆ ಯಾವುದೇ ಪ್ರೀಮಿಯಂ ಯಾ ಶುಲ್ಕ ಆಕರಣೆಮಾಡುತ್ತಿಲ್ಲ.
    * “ಮರಣೋತ್ತರ ನಿಧಿ” ಸಕ್ರೀಯವಾಗಿ ವ್ಯವಹರಿಸುವ ಶೇರು ಸದಸ್ಯರು ಮೃತರಾದ ಸಂದರ್ಬದಲ್ಲಿ ಮೃತರ ಕುಟುಂಭಕ್ಕೆ ಈ ನಿಧಿಯಿಂದ ಧನಸಹಾಯ
    * ಸಂಘದಿಂದ ಉತ್ಪಾದಿಸಿ ಮಾರಾಟ ಮಾಡುತ್ತಿರುವ “TMS” ಬ್ರಾಂಡ್ ಪಶು ಆಹಾರ, ಕರುಗಳ ಆಹಾರ ಹಾಗೂ ಮಿನರಲ್ ಮಿಕ್ಷರ್
     ಒಣ ಮೇವಿನ “ಮೇವಚ್ಚು” ತಯಾರಿಸಿ ವಿಕ್ರಿ ಮಾಡಲಾಗುತ್ತಿದೆ. ಹಸಿ ಹುಲ್ಲು ಬಗ್ಗೆ ಮನೆ ಆವರಣದಲ್ಲಿ ಬೆಳೆಯಬಹುದಾದ ಹೈಡ್ರೋಫೋನಿಕ್ ತಂತ್ರಜ್ಞಾನ, ಸೈಲೆಜ್ ಮಾರಾಟ ವ್ಯವಸ್ಥೆ. ರೈತರಿಗೆ ತೋಟ, ಗದ್ದೆಗಳಲ್ಲಿ ಡ್ರೈನೆಜ್ ಕಾಲುವೆ, ಬಸಿ ಕಾಲುವೆ ಹಾಗೂ ಇನ್ನಿತರ ಕೆಲಸಗಳಿಗೆ ಸಂಬಂದಿಸಿ ಕೃಷಿ ಪದವಿಧರರಿಂದ ಮಾಹಿತಿ.
    * “ಮಿನಿ ಹಿಟಾಚಿ” ತೋಟ,ಗದ್ದೆಗಳಲ್ಲಿ ಕೆಲಸಮಾಡಲು ಬಹಳ ಅನುಕೂಲ ಯೋಗ್ಯ ದರದಲ್ಲಿ ಬಾಡಿಗೆಗೆ ಲಭ್ಯವಿದೆ . ಕೃಷಿ ವಿಭಾಗದ ಮೂಲಕ ಡ್ರಿಪ್ ಪೈಪ್ಸ್, ನೀರಾವರಿ ಪೈಪ್ಸ್, ಪಿಟ್ಟಿಂಗ್ಸ್, ಪಂಪಸೆಟ್ಸ್, ರೂಫಿಂಗ್ ಶೀಟ್ಸ್, ಕೃಷಿ ಉಪಯೋಗ ಮಷಿನರಿಗಳು ಇತ್ಯಾದಿಗಳು ಲಭ್ಯ.
    * ಮುಂಜಾನೆ 9.30 ಘಂಟೆಯಿಂದ ಸಾಯಂಕಾಲ 6.30ಘಂಟೆಯವರೆಗೆ ನಿರಂತರವಾಗಿ ಕ್ಯಾಶ್ ಕೌಂಟರ್ ಚಾಲು ಇರುತ್ತದೆ. ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಸಹ ಬದಲಿ ವ್ಯವಸ್ಥೆ ಮುಖಾಂತರ ಕ್ಯಾಶ್ ಕೌಂಟರ್ ಚಾಲೂ ಇರುತ್ತದೆ.

    ನ.13ಕ್ಕೆ ವಾರ್ಷಿಕ ಸಭೆ: ನ.13 ಶನಿವಾರ ಮಧ್ಯಾಹ್ನ 3.30 ಘಂಟೆಗೆ ಸಂಘದ “ಸೇಲ್‍ಯಾರ್ಡ” ನಲ್ಲಿ 2020-21 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಲಿದೆ. ಸಭೆ ಬಳಿಕ ಸಂಜೆ 5.30 ಘಂಟೆಗೆ ಯಕ್ಷರಂಗದ ಪ್ರಸಿದ್ಧ ಕಲಾವಿದರುಗಳಿಂದ “ಮಾರುತಿ ಪ್ರತಾಪ ” ಯಕ್ಷಗಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top