ಶಿರಸಿ: ಗ್ರಾಮೀಣ ಕಲೆ, ಜಾನಪದ, ಸಂಸ್ಕೃತಿ ಉಳಿಸಿ ಬೆಳಸಬೇಕು ಎಂಬ ಆಶಯದಲ್ಲಿ ಇಲ್ಲಿನ ಶಬರ ಸಂಸ್ಥೆ ನಡೆಸುತ್ತಿರುವ ನಮ್ಮೂರ ಹಬ್ಬಕ್ಕೆ ದಶಮಾನದ ಸಂಭ್ರಮ, ಈ ಬಾರಿಯ ನಮ್ಮೂರ ಹಬ್ಬವನ್ನು ನ.13 ಹಾಗೂ 14ರಂದು ವಿವಿಧ ಸಂಘಟನೆಗಳ ಸಹಕಾರದಲ್ಲಿ ತಾಲೂಕಿನ ಕೊಡಗದ್ದೆ ಪಂಚಾಯಿತಿ ಮಟ್ಟದಲ್ಲಿ ನಿಸರ್ಗ ರಂಗಸ್ಥಳ, ಮಾರಿಕಾಂಬಾ ದೇವಸ್ಥಾನದ ಹತ್ತಿರ ಮಣ್ಮನೆಯಲ್ಲಿ ಹಮ್ಮಿಕೊಂಡಿದೆ.
ಗುರುವಾರ ಶಬರ ಸಂಸ್ಥೆಯ ಕಾರ್ಯದರ್ಶಿ ಸೋಂದಾ ನಾಗರಾಜ ಜೋಶಿ ಮತ್ತು ನಮ್ಮೂರಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ ಹೆಗಡೆ ಮಣ್ಮನ ಮಾಹಿತಿ ನೀಡಿ, ಹಳ್ಳಿಯ ರಸ್ತೆಗಳೆಲ್ಲವೂ ನಗರದ ಮುಖ ಮಾಡಿದೆ. ಹಳ್ಳಿಗಳು ಭಾಗಶಃ ವೃದ್ಧಾಶ್ರಮಗಳಾಗುತ್ತಿದೆ. ನಮ್ಮ ಹಳ್ಳಿಗಳಲ್ಲಿರುವ ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿ ನಾಶವಾಗುತ್ತಿದೆ. ಕೃಷಿ ಚಟುವಟಿಕೆಗಳಲ್ಲಿ ಅನಿವಾರ್ಯವಾದ ಯಾಂತ್ರೀಕರಣಗಳೆಂದ ಹಲವಾರು ಗ್ರಾಮೀಣ ಕೃಷಿ ತಂತ್ರ ಜ್ಞಾನಗಳು ನಶಿಸುತ್ತಿದೆ. ನಾಗರೀಕತೆ ಬೆಳೆದಂತೆಲ್ಲ ಗ್ರಾಮೀಣ ಆಟಗಳೆಲ್ಲ ನಶಿಸಿ ಏಕ ಜಾತಿಯ ನಡುತೋಪಿನಂತೆ ಒಂದೇ ರೀತಿಯ ಕ್ರಿಕೆಟ್ ಆಟಗಳಂತ ಆಟಗಳಿಗೆ ಸೀಮಿತವಾಗಿದೆ. ದೂರದರ್ಶನ, ಕಂಪ್ಯೂಟರ್, ಮೊಬೈಲ್ ಮುಂತಾದ ಸಾಮಗ್ರಿಗಳ ಬಳಕೆಗಳಿಂದ ನಮ್ಮ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲ ಮರೆತು ನಾವು ಅವುಗಳ ಮುಂದೆ ಕುಳಿತು ನಮ್ಮ ಎಲ್ಲ ಪ್ರತಿಭೆಗಳನ್ನು ನಮಗರಿವಿಲ್ಲದಂತೆ ಕೊಂದುಕೊಂಡು ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ಕಾರಣದಿಂದ ಇಂಥ ಉತ್ಸವಗಳ ಮೂಲಕ ಜಾಗೃತಿ ಮೂಡಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಈ ಹಬ್ಬದಲ್ಲಿ ಸ್ಥಳೀಯ ಜನಪದ ಕಲೆಗಳಿಗೆ ಹಾಗೂ ಕಲಾವಿದರುಗಳಿಗೆ ವೇದಿಕೆ ಕಲ್ಪಿಸುವದು. ಮತ್ತು ಗ್ರಾಮೀಣ ಮತ್ತು ಕೃಷಿ ಸಂಸ್ಕೃತಿಗೆ ಪೂರಕವಾದ ಆಟಗಳನ್ನು ಆಡಿಸುವದು, ಸ್ಪರ್ಧೆಗಳನ್ನು ಏರ್ಪಡಿಸುವದು, ಕೆಲವು ಅಪರೂಪದ ಕೃಷಿ ಬಳಕೆಯ ಸಾಮಗ್ರಿಗಳ ಪ್ರದರ್ಶನ ಹೀಗೆ ಹಲವು ವಿಧಗಳ ಹಬ್ಬದ ವಾತಾವರಣಗಳನ್ನು ಸೃಷ್ಟಿಸುವ ಚಟುವಟಿಕೆಗಳಿರುತ್ತದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಜನ ಮಹನೀಯರಿಗೆ ಸಮ್ಮಾನ ನಡೆಯಲಿದೆ. ಈ ಸಾರೆ ನಮ್ಮೂರ ಹಬ್ಬ ಉಳಿದ ಹಬ್ಬದಂತಲ್ಲ. ಪರಿಸದ ಕುರಿತಾಗಿ ಪ್ರೀತಿ ಮತ್ತು ಕಾಳಜಿ ಮೂಡುವ ವಾತಾವರಣ ಸೃಷ್ಟಿಸಲು ಸುಂದರ ಪರಿಸರದ ಮಧ್ಯದಲ್ಲಿಯೇ ನಿಸರ್ಗ ರಂಗಸ್ಥಳದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ ಎಂದೂ ಹೇಳಿದರು.
ಬೆಳಿಗ್ಗೆ 10ಕ್ಕೆ ಸ್ಪರ್ಧಾ ಕಾರ್ಯಕ್ರಮದ ಚಾಲನೆ ವೃಕ್ಷ ಪೂಜೆ ಮಾಡುವದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಕೋಡಗದ್ದೆ ಪಂಚಾಯತ ವ್ಯಾಪ್ತಿಯ ಪುರುಷರಿಗೆ ಶಂಖನಾದ ಸ್ಪರ್ಧೆ ಮತ್ತು ಒ0ದೇ ಒ0ದು ನಿಮಿಷ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರಿಗೆ ಸಿಹಿ ತಿಂಡಿ ಸ್ಪರ್ಧೆ, ನೈಸರ್ಗಿಕ ವಸ್ತುಗಳನ್ನು ಬಳಸಿ, ಆರತಿ ತಾಟಿನ ಸ್ಪರ್ಧೆ ನಡೆಯುತ್ತದೆ. ಮಧ್ಯಾಹ್ನ 3:30 ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮವಿದೆ.
ಇಳಿಹೊತ್ತು 4:30 ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಡಗದ್ದೆ ಪಂಚಾಯತದ ಅಧ್ಯಕ್ಷ ರಾಜೇಶ್ವರಿ ಭಟ್ಟ ವಹಿಸಲಿದ್ದಾರೆ. ಉದ್ಘಾಟಕರಾಗಿ ವಿ ಆರ್ ಡಿ ಎಮ್ ಟ್ರಸ್ಟ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್ ಜಿ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಶಿಲ್ಪಕಲೆ ಮತ್ತು ಯಕ್ಷಗಾನದಲ್ಲಿ ಸೇವೆಸಲ್ಲಿಸುತ್ತಿರುವ ವೆಂಕಟ್ರಮಣ ಹೆಗಡೆ ಬಾಳೆಕಾಯಿಮನೆ, ಪ್ರಗತಿಪರ ಕೃಷಿಕ ಅನಂತ ರಾಮಚಂದ್ರ ಹೆಗಡೆ ನೆಲ್ಲಳ್ಳಿಮಠ, ಜನಪದ ಕಲೆಯಲ್ಲಿ ತಿಮ್ಮಾ ಗೌಡ ಅವರನ್ನು ಸಮ್ಮಾನಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿಮ್ಮ ಗೌಡ ಮತ್ತು ಗಣಪತಿ ಗೌಡ ಸಂಗಡಿಗರಿಂದ ಕೊಳಲಾಟ, ಬೆಳ್ಳಾ ಗೌಡ ಹಾಸ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಮಾರಿಕಾಂಬಾ ಪ್ರಾಸಾದಿತ ತಾಳಮದ್ದಳ ಕೂಟ ಮನೆ ಇವರಿಂದ ಸುಭದ್ರಾ ಕಲ್ಯಾಣ ತಾಳಮದ್ದಲೆ, ಕಾರ್ಯಕ್ರಮ ನಡೆಯಲಿದೆ. ಗಜಾನನ ಭಟ್ಟಿ ತುಳಗೇರಿ, ಪ್ರಶಾಂತ ಭಂಡಾರಿ, ರಾಧಾಕೃಷ್ಣ ಕಲ್ಚಾರ್, ಮಂಜುನಾಥ ಗೊರನಮನೆ, ರಾಮಚಂದ್ರ ಭಟ್ಟ ಶಿರಳಗಿ, ಅರುಣಕುಮಾರ ಭಟ್ಟಿ ಮತ್ತು ಪ್ರವೀಣ ಮಣ್ಮನೆ ಭಾಗವಹಿಸಲಿದ್ದಾರೆ.
ನ.14ರಂದು ಬೆಳಿಗ್ಗೆ 10ರಿಂದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಕ್ಕಳಿಗೆ ಪರಿಸರದ ಕುರಿತಾದ ಚಿತ್ರಕಲಾ ಸ್ಪರ್ಧೆ, ಸಂಗೀತ ಕುರ್ಚಿ ಮತ್ತು ಒಂದೇ ಒಂದು ನಿಮಿಷ ಸ್ಪರ್ಧೆಗಳು ನಡೆಯುತ್ತದೆ. ಮಹಿಳೆಯರಿಗೆ ಸಂಪ್ರದಾಯದ ಹಾಡು ಮತ್ತು ರಂಗವಲ್ಲಿ, ಸಂಗೀತ ಖುರ್ಚಿ ಮತ್ತು ಒಂದೇ ನಿಮಿಷ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ರಿಂದ ಮಕ್ಕಳ ಸಾಂಸ್ಕೃತಿಕ ಒಂದು ಕಾರ್ಯಕ್ರಮ ಮತ್ತು ಪಿ ಎಸ್ ಭಟ್ಟ ಬೋಲ್ಮಠ ಇವರಿಂದ ಭಜನಾ ಕಾರ್ಯಕ್ರಮ ನಡೆಯುತ್ತದೆ.
4:30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಸೇವಾ ಸಹಕಾರಿ ಸಂಘ ಮೆಣಸಿ ಅಧ್ಯಕ್ಷ ಎನ್. ಎಸ್ ಹೆಗಡೆ ಕೋಟಿಕೊಪ್ಪ, ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕಲಾಪೆÇೀಷಕ ಆರ್ ಜಿ ಭಟ್ಟ ಹುಬ್ಬಳ್ಳಿ, ಹುಲೇಕಲ್ ವಲಯಾರಣ್ಯ ಅಧಿಕಾರಿ ಮಂಜುನಾಥ ಹೆಬ್ಬಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ಉದಯವಾಣಿ ವರದಿಗಾರರಾದ ರಾಘವೇಂದ್ರ ಬೆಟ್ಟಕೊಪ್ಪ ಆಗಮಿಸಲಿದ್ದಾರೆ. ಸಂಪ್ರದಾಯದ ಹಾಡುಗಳನ್ನು ರಚಿಸುವ ಮತ್ತು ಹಾಡುವದರಲ್ಲಿ ಸಾಧನೆ ಮಾಡಿದ ಅನಸೂಯಾ ಭಟ್ಟ ಗೋಪನಮರಿ, ಕೃಷಿಪದವಿಯಲ್ಲಿ ಹದಿಮೂರು ಚಿನ್ನದ ಪದಕ ಪಡೆದ ಶರತ್ ಕೊಠಾರಿ, ಉತ್ತರ ಕನ್ನಡ ಜಿಲ್ಲೆಯ ಸಂಪ್ರದಾಯದ ಚಿತ್ರಕಲೆಯ ಕುರಿತಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ ಎಚ್.ಡಿ ಭಟ್ಟಿರವರಿಗೆ ಸಮ್ಮಾನ ಮಾಡಲಾಗುತ್ತಿದೆ.
ನಂತರ ನಡೆಯುವ ಪದವಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ಧಿವಿನಾಯಕ ಕಲಾಮಂಡಳಿ ಗದೈಹಳ್ಳಿ ಇವರಿಂದ ದಮಾಮಿ ಕುಣಿತ, ಸಾಕ್ಷಿ ಹೆಗಡೆ ಅಲ್ಲಾಳಮನೆ ಸಂಗಡಿಗರಿಂದ ಭಾವಗೀತೆ, ನಂತರ ನಡೆಯುವ ಯಕ್ಷ ದೃಶ್ಯ ವೈಭವದಲ್ಲಿ ಗಣೇಶ ಆಚಾರಿ ಜಿಲ್ಲಾಡಿ, ಅನಿರುದ್ಧ, ಬೆಣ್ಣೆ ಮನೆ, ಪಸನ್ನ ಹೆಗ್ಗಾರ್, ಚಂದ್ರಹಾಸ ಗೌಡ ಹೊಸಪಟ್ಟಣ, ನಾಗರಾಜ ಕುಂಕಿಪಾಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.