• first
    second
    third
    previous arrow
    next arrow
  • ನ.14ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

    300x250 AD

    ಶಿರಸಿ: ನಗರದ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ `ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ’ ನ.14 ರವಿವಾರದಂದು ಏರ್ಪಡಿಸಲಾಗಿದೆ.


    ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.00 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯ ಡಾ.ಎಸ್.ಸಿ.ಕುಲಕರ್ಣಿಪಾಲ್ಗೊಂಡು ಸಲಹೆ, ಚಿಕಿತ್ಸೆ ನೀಡಲಿದ್ದಾರೆ. ಕಾರಣ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು.

    300x250 AD


    ಈ ಸಂದರ್ಭದಲ್ಲಿ ಕೋವಿಡ್-19ರ ಸುರಕ್ಷತಾ ಕ್ರಮಗಳಾದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಧೀರ ಭಟ್ ಹಾಗೂ ಕಾರ್ಯದರ್ಶಿ ಅನಂತ ಹೆಗಡೆ ಆಶೀಸರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top