ಯಲ್ಲಾಪುರ: ಯಕ್ಷಗಾನದ ಪರಂಪರೆ, ಶ್ರೇಷ್ಠತೆಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಯುವ ಕಲಾವಿದರ ಮೇಲಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ತಾಲೂಕಿನ ಬಾರೆಯಲ್ಲಿ ಹಮ್ಮಿಕೊಂಡಿದ್ದ ಯಕ್ಷಾಭಿವಂದನ ತಂಡದ ಯಕ್ಷಗಾನದ ಸಂದರ್ಭದಲ್ಲಿ ಖ್ಯಾತ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಮಾತನಾಡಿದರು. ಕಲಾ ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆಯಬೇಕು. ಯುವ, ಪ್ರತಿಭಾವಂತ ಕಲಾವಿದರನ್ನು ಪೆÇ್ರೀತ್ಸಾಹಿಸುವ ಕಾರ್ಯಗಳು ನಡೆದಾಗ ಕಲೆ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿದ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಮಾತನಾಡಿ, ಸನ್ಮಾನ, ಪುರಸ್ಕಾರಗಳು ಕಲಾವಿದರ ಜವಾಬ್ದಾರಿ ಹೆಚ್ಚಿಸುತ್ತವೆ. ಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ ಎಂದರು.
ಗ್ರಾ.ಪಂ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ, ಸದಸ್ಯ ದೀಪಕ ಭಟ್ಟ, ಸ್ಥಳೀಯ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಪ್ರಮುಖರಾದ ಸಿ.ಜಿ.ಹೆಗಡೆ, ಪುಟ್ಟಯ್ಯ ಭಟ್ಟ, ಸಾಂಬಶಿವ ಭಟ್ಟ, ಸುಬ್ಬಯ್ಯ ಧೋಗಳೆ, ಸಂಘಟಕ ಗಜಾನನ ಗಾಂವ್ಕಾರ ಇತರರಿದ್ದರು. ಯಕ್ಷಾಭಿವಂದನ ತಂಡದವರಿಂದ ಮಾಯಾಪುರಿ ಹಾಗೂ ತರಣಿಸೇನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.