ಯಲ್ಲಾಪುರ: ಮಣ್ಣಿಗೆ ಜೀವವಿದೆ ಎಂದು ತಿಳಿದಾಗ ಮಾತ್ರ ನಾವು ಉತ್ತಮ ರೈತರಾಗಲು ಸಾಧ್ಯ. ಮಣ್ಣು ಚೆನ್ನಾಗಿದ್ದರೆ ನಾವು ಬೆಳೆಯುವ ಬೆಳೆಗಳೂ ಉತ್ತಮವಾಗುತ್ತವೆ. ಹಾಗಾಗಿ ನಾವು ಮಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಹೇಳಿದರು.
ಉಮ್ಮಚ್ಗಿ ಗ್ರಾ.ಪಂ.ವ್ಯಾಪ್ತಿಯ ಕನೇನಳ್ಳಿ ಭಾಸ್ಕರ ಹೆಗಡೆ ಕುಂಬ್ರಿಗುಡ್ಡೆ ಇವರ ಮನೆಯಲ್ಲಿ ಜಿಲ್ಲಾಪಂಚಾಯತ ಉತ್ತರಕನ್ನಡ, ತೋಟಗಾರಿಕೆ ಇಲಾಖೆ ಯಲ್ಲಾಪುರ, ಕೃಷಿ ಇಲಾಖೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ 20221-22ನೇ ಸಾಲಿನ ಆತ್ಮಾಯೋಜನೆಯ ಅಡಿ ನಡೆದ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದ ಎರಡನೇ ಕಂತಿನಲ್ಲಿ ಮಣ್ಣಿನ ಫಲವತ್ತತೆಯ ಕುರಿತು ಮಾತನಾಡುತ್ತಿದ್ದರು. ಮಣ್ಣಿಗೆ ಬೇಕಾದ ಪದಾರ್ಥಗಳನ್ನು ನಾವು ನಿಯಮಿತವಾಗಿ ಕೊಡಬೇಕು. ಅದಕ್ಕೂ ಮೊದಲು ಮಣ್ಣಿನ ಪರೀಕ್ಷೆ ಮಾಡಿಕೊಂಡರೆ ಒಳ್ಳೆಯದು. ಈ ಭಾಗದ ಮಣ್ಣಿಗೆ ಪ್ರತಿ ವರ್ಷ ಸುಣ್ಣ ಹಾಕಬೇಕಾಗುತ್ತದೆ ಎಂದರು.
ವೇದಿಕೆಯಲ್ಲಿ ಕೃಷಿ ಇಲಾಖೆ ಯಲ್ಲಾಪುರ ನಾಗರಾಜ ನಾಯ್ಕ, ಕೃಷಿ ಇಲಾಖೆ ಪ್ರಕಾಶ ಸಾಸನೂರು, ತೋಟಗಾರಿಖೆ ಇಲಾಖೆ ಯಲ್ಲಾಪುರ ಕೀರ್ತಿ, ರೈತ ಭಾಸ್ಕರ ಹೆಗಡೆ, ಉದಯ ಭಟ್ಟ ಕಲ್ಲಳ್ಳಿ, ಗ.ರಾ.ಭಟ್ಟ ಸದಸ್ಯರು ಗ್ರಾ.ಪಂ. ಉಮ್ಮಚ್ಗಿ ಮೊದಲಾದವರಿದ್ದರು.
ಎಂ.ಜಿ. ಭಟ್ಟ ಕೃಷಿ ಇಲಾಖೆ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದನಾರ್ಪಣೆ ಮಾಡಿದರು.