Slide
Slide
Slide
previous arrow
next arrow

ಆನಗೋಡಿನಲ್ಲಿ ಸಂಕಲ್ಪೋತ್ಸವ; ಪ್ರೇಕ್ಷಕರ ರಂಜಿಸಿದ ‘ಭೃಗುಶಾಪ’ ತಾಳಮದ್ದಲೆ

300x250 AD

ಯಲ್ಲಾಪುರ: ಸಂಕಲ್ಪ ಸಂಸ್ಥೆ, ಯಕ್ಷ ಕಲಾ ಬಳಗ ನಂದೊಳ್ಳಿ, ಸುದರ್ಶನ ಸೇವ ಪ್ರತಿಷ್ಠಾನ ಆನಗೋಡ ಸಹಯೋಗದಲ್ಲಿ ‘ಭೃಗುಶಾಪ’ ಯಕ್ಷಗಾನ ತಾಳಮದ್ದಲೆ ಪ್ರಸಂಗ ಮತ್ತು ಸಂಗೀತ ಕಾರ್ಯಕ್ರಮ ಆನಗೋಡ ಗೊಪಾಲಕೃಷ್ಣ ದೇವಸ್ಥಾನದ ಸುದರ್ಶನ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಸಂಕಲ್ಪ ಸೇವಾಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ದೀಪಬೆಳಗಿ ಉದ್ಘಾಟಿಸಿ ಮಾತನಾಡಿ ಇವತ್ತು ಐದನೆ ದಿನದ ಸಂಕಲ್ಪೋತ್ಸವ ಇಲ್ಲಿ ನಡೆಯುತ್ತಿರುವದು ಸಂತೋಷ ತಂದಿದೆ. ತಾಳಮದ್ದಲೆಯಲ್ಲಿ ಒಳ್ಳೆಯ ಅರ್ಥಧಾರಿಗಳಿದ್ದಾರೆ ಅವರ ಮಾತಿನ ಚತುರತೆಯನ್ನು ಕಾಣಲಿದ್ದೀರಿ. ಮೊವತೈದನೆ ವರ್ಷದ ಸಂಕಲ್ಪ ಉತ್ಸವ ಜನರ ಉತ್ಸವವಾಗಿ ಹೊರಹೊಮ್ಮಿದೆ ಇದಕ್ಕೆ ಕಾರಣ ಕಲಾಸಕ್ತರಾದ ನಿಮ್ಮ ಪ್ರೀತಿ ಕಾರಣ ಎಂದರು.


ವೇದಿಕೆಯಲ್ಲಿ ಗಣಪತಿ ಎನ್ ಗಾವಂಕರ ವಡಗಿರಪಾಲ, ಎಮ್ ಎನ್ ಹೆಗಡೆ ಹಳವಳ್ಳಿ, ಶಿವರಾಮ ಭಟ್ಟ ಹಿಟ್ಟಿನಬೈಲ್ ದಂಪತಿಗಳು, ತಬಲಾ ವಾದಕರಾದ ನಾರಾಯಣ ಭಟ್ಟ,ಶ್ರತಿ ಎನ್ ಭಟ್ಟ, ಸತೀಶ ಹೆಗ್ಗಾರ ಉಪಸ್ಥಿತರಿದ್ದರು. ಅರ್ಥ ಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ವಿದ್ವಾನ್ ಎಲ್.ವಾಸುದೇವ ಭಟ್ಟ, ಹರೀಶ ಬಳಂತಿ ಮೊಗರು, ಪವನ ಕಿರಣಕೆರೆ, ವಿದ್ವಾನ್ ಶಿವರಾಮ ಭಟ್ಟ ಮೊಟ್ಟೆಗದ್ದೆ, ಚಿನ್ನಗಾರ

300x250 AD

ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಟ್ಟ ಮೊಟ್ಟೆಗದ್ದೆ, ಅನಂತ ದಂತಳಿಗೆ, ಮೃದಂಗ ವಾದಕರಾಗಿ ಗಣಪತಿ ಕವಾಳೆ ಪಾಲ್ಗೊಂಡಿದ್ದರು. ಸುದರ್ಶನ ಸೇವಾ ಪ್ರತಿಷ್ಠಾನ ಅಧ್ಯಕ್ಷ ಗಣಪತಿ ಮಾನಿಗದ್ದೆ ಸ್ವಾಗತಿಸಿ ವಂದಿಸಿದರು. ಸಂಯೋಜಕರಾದ ನರಸಿಂಹ ಎಸ್ ಭಟ್ಟ ನಂದೊಳ್ಳಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top