ಶಿರಸಿ: ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಶಿರಸಿಯ ಯೋಗ ಪ್ರಾಣ ವಿದ್ಯಾ ಕೇಂದ್ರದಿಂದ ಯೋಗ ಪ್ರಾಣ ವಿದ್ಯಾ ತರಬೇತಿ ಶಿಬಿರ ಇಂದು ಜರುಗಿತು.
ಯೋಗ ತರಬೇತುದಾರರರು ಹಾಗೂ ಪ್ರಾಣಿಕ್ ಹೀಲಿಂಗ್ ಪರಿಣಿತರಾದ ಹಾಸನದ ರಮ್ಯಾ ಅಶ್ವಿನ್ ಇವರು ಯೋಗ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಯನದಲ್ಲಿ ಏಕಾಗ್ರತೆ, ವೈಯುಕ್ತಿಕ ಶಿಸ್ತು, ತಾಳ್ಮೆ ಸಂಯಮ ಹಾಗೂ ಜೀವನದಲ್ಲಿ ಸಾಧನೆಗೆ ಪೂರಕವಾದ ಪ್ರಾಣ ವಿದ್ಯಾ ಯೋಗದ ತಂತ್ರಗಳನ್ನು ಪ್ರಾತ್ಯಕ್ಷಕೆ ಹಾಗೂ ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಕೆಲವೊಂದು ಉತ್ತಮ ಸಲಹೆ ನೀಡಿದರು. ತಮ್ಮ ಹಾಸ್ಯಾತ್ಮಕ, ಮೃದು ನುಡಿಗಳ ಹಿತವಚನ ಹೇಳಿ, ಕೆಲವೊಂದು ಆಸನಗಳನ್ನು ಕೂಡಾ ಕಲಿಸಿಕೊಟ್ಟರು.
ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಇವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ರಮ್ಯಾ ಅಶ್ವಿನ್ ಇವರ ಪರಿಚಯ ಮಾಡಿಕೊಟ್ಟರು. ಅಶ್ವಿನ್, ಶಿರಸಿಯ ಯೋಗ ಪ್ರಾಣ ವಿದ್ಯಾ ಕೇಂದ್ರ ಕಾರ್ಯಕರ್ತೆಯ ಸೀತಾ ಕೂರ್ಸೆ, ಶಾಂತಲಾ ಹೆಗಡೆ ಮತ್ತು ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸಹಶಿಕ್ಷಕಿ ಕು.ಶೃತಿ ಪವಾರ್ ವಂದಿಸಿದರು. ಅತ್ಯಂತ ಉಪಯುಕ್ತ ಹಾಗೂ ಸಕಾಲಿಕವಾದ ಈ ಕಾರ್ಯಕ್ರಮದ ಪ್ರಯೋಜನವನ್ನು ಲಯನ್ಸ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡರು.