ಗ್ಲಾಸ್ಗೋ: ಜಾಗತಿಕ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (ಸಿಸಿಪಿಐ)ದಲ್ಲಿ ಉತ್ತಮ ಪ್ರದರ್ಶನ ನೀಡಿದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸತತ ಮೂರನೇ ವರ್ಷವೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
COP26 ಸಂದರ್ಭದಲ್ಲಿ ಜರ್ಮನ್ ವಾಚ್ ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.
ಆದರೆ ಜಾಗತಿಕ ಹವಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಸಮಗ್ರ ಶ್ರೇಯಾಂಕ ಪಡೆಯಲು ಯಾವುದೇ ರಾಷ್ಟ್ರಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿಲ್ಲ. ಹೀಗಾಗೀ ಸಮಗ್ರ ಶ್ರೇಯಾಂಕದ ಮೊದಲ ಮೂರು ಸ್ಥಾನಗಳು ಖಾಲಿ ಉಳಿದಿವೆ. ಡೆನ್ಮಾರ್ಕ್ 4ನೇ ಸ್ಥಾನವನ್ನು ಪಡೆದುಕೊಂಡಿದ್ದು, ಜಗತ್ತಿನಲ್ಲಿ ಉನ್ನತ ಸ್ಥಾನ ಇದಾಗಿದೆ. ಆದರೆ ಅದು ಕೂಡ ಸಮಗ್ರ ಶ್ರೇಯಾಂಕ ಪಡೆಯುವಷ್ಟು ಉತ್ತಮ ಸಾಧನೆ ಮಾಡಿಲ್ಲ.
ಭಾರತ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಜಗತ್ತಿನಲ್ಲಿ ಅದು 6ನೇ ಸ್ಥಾನದಲ್ಲಿ ಇದೆ.
ಸಾಂಕ್ರಾಮಿಕ ರೋಗ ನೀಡಿದ ಸಾವಾಲುಗಳ ನಡುವೆಯೂ ಭಾರತ ಸತತ ಮೂರನೇ ವರ್ಷವೂ ಈ ಸ್ಥಾನವನ್ನು ಪಡೆದುಕೊಂಡಿರುವುದು ಉತ್ತಮ ಸಾಧನೆಯಾಗಿದೆ.
ನ್ಯೂಸ್ 13