ಅಡುಗೆ ಮನೆ: ಮಾಡುವ ವಿಧಾನ: 4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ, 2 ಟೋಮೋಟೋ, 1 ಈರುಳ್ಳಿ, 3 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ, 2 ಟೀ ಚಮಚ ಗಸಗಸೆ, 6 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ.
ಮೊದಲು ಗಸಗಸೆ ರುಬ್ಬಿ ನಂತರ ಕಾಯಿ ತುರಿ ಸೇರಿಸಿ ರುಬ್ಬಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ ಹೆಚ್ಚಿದ ಟೋಮೇಟೋ, ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ ಹಾಕಿ ಹುರಿದು, ರುಬ್ಬಿದ ಮಿಶ್ರಣ, 1 ಟೀ ಚಮಚ ಖಾರದ ಪುಡಿ, 1 ಚಮಚ ಧನಿಯಾ ಪುಡಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.
ನಂತರ ಆಲೂಗೆಡ್ಡೆಯ ತುಂಡುಗಳು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಆಲೂ ಕುರ್ಮಾ ರೆಡಿ!