ಶಿರಸಿ: ದಿವಗಿಯ ಶ್ರೀರಾಮಾನಂದ ಅವಧೂತ ಸ್ವಾಮೀಜಿಗಳ ಸಂಸ್ಮರಣೋತ್ಸವದ ಅಂವಗಾಗಿ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಸ್ಥಾನದಲ್ಲಿ ಡಿ.10ರ ತನಕ ಪ್ರತಿ ದಿನ ಪುರುಷ ಸೂಕ್ತ ಹೋಮ, ಮಹಾನಾರಾಯಣ ಉಪನಿಷತ್ ಪಾರಾಯಣವನ್ನು ನಡೆಸಲು ಬುಧವಾರದಿಂದ ಚಾಲನೆ ನೀಡಲಾಗಿದೆ.
ಗುರು ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬಹುದಾಗಿದೆ. ಜತೆಗೆ ಹವನಕ್ಕೆ ಅಗತ್ಯವಾದ ಹಲಸಿನ ಚಕ್ಕೆ, ತುಪ್ಪ, ಕಾಯಿ ಇತ್ಯಾದಿಗಳನ್ನು ನೀಡಲು ಅವಕಾಶ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.