• Slide
  Slide
  Slide
  previous arrow
  next arrow
 • ಎಂ.ಎ.ಹೆಗಡೆ ನೆನಪಿನಲ್ಲಿ ಸರಣಿ ಕಾರ್ಯಕ್ರಮಕ್ಕೆ ಚಾಲನೆ

  300x250 AD


  ಶಿರಸಿ: ಸಂಸ್ಕøತ, ಕನ್ನಡ, ಆಂಗ್ಲ ಭಾಷೆಗಳ ಮೇರು ವಿದ್ವಾಂಸ, ಯಕ್ಷಗಾನ ಸಾಹಿತಿ, ಕಲಾವಿದ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಪ್ರೋ. ಎಂ.ಎ. ಹೆಗಡೆ ಅವರ ನೆನಪಿನಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷಶಾಲ್ಮಲಾ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

  ಯಕ್ಷ ಶಾಲ್ಮಲಾದ ಅಧ್ಯಕ್ಷರೂ ಆಗಿದ್ದ ಎಂ.ಎ.ಹೆಗಡೆ ಅವರು, ಕಳೆದ ಏ.18ರಂದು ವಿಧಿ ವಶರಾಗಿದ್ದು, ಅವರ ಸ್ಮರಣೆಯಲ್ಲಿ ರಾಜ್ಯದ ಹಲವಡೆ ವರ್ಷವಿಡೀ ಕಾರ್ಯಕ್ರಮ ನಡೆಸಲು ಯಕ್ಷ ಶಾಲ್ಮಲಾ ಯೋಜಿಸಿದ್ದು, ಸರಣಿ ಕಾರ್ಯಕ್ರಮಗಳ ಪ್ರಾರಂಭೋತ್ಸವ ನ.12ರ ಸಂಜೆ 5ಕ್ಕೆ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಯಲಿದೆ.


  ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಲೋಕ ಶಿಕ್ಷಣ ಟ್ರಸ್ಟನ ಸಿಇಓ, ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ ಮೋಹ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಳಿಕ ವಿದುರಾತಿಥ್ಯ ಯಕ್ಷಗಾನ ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಶ್ರೀಪಾದ ಭಟ್ಟ ಮೂಡಗಾರ ಪಾಲ್ಗೊಳ್ಳುವರು.

  300x250 AD

  ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಡಾ. ಡಿ.ಕೆ.ಗಾಂವಕರ್, ಡಾ. ಮಹೇಶ ಭಟ್ಟ ಉಮ್ಮಚಗಿ, ಪದ್ಮನಾಭ ಅರೆಕಟ್ಟ, ಚಂದ್ರಕಲಾ ಭಟ್ಟ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ಯಕ್ಷಶಾಲ್ಮಲಾದ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top