ಶಿರಸಿ: ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಜೇನು ಕೃಷಿ ಅತ್ಯಂತ ಪರಿಣಾಮಕಾರಿ ಎಂದು ಇಲ್ಲಿನ ಜೇನು ತಜ್ಞ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹೇಳಿದರು.
ಅವರು ಹಾವೇರಿ ಜಿಲ್ಲೆಯ ಹಿರೇಕೇರೂರಿನ ರಟ್ಟಿಹಳ್ಳಿಯಲ್ಲಿ ಹಮ್ಮಿಕೊಂಡ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಸಕ್ತಿಯಿಂದ ಜೇನು ಕೃಷಿ ಮಾಡಿದರೆ ಒಳ್ಳೆ ಆದಾಯ ಕೂಡ ಪಡೆದುಕೊಳ್ಳಬಹುದು. ಜೇನು ಕೃಷಿ ನಮ್ಮ ತೋಟಗಳ ಇಳುವರಿ ಕೂಡ ಹೆಚ್ಚಾಗುತ್ತದೆ ಎಂದು ಉದಾಹರಣೆ ಸಹಿತ ಮಾತನಾಡಿದರು.
ಇದೇ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜೊತೆಗೂ ಮಧುಕೇಶ್ವರ ಹೆಗಡೆ ಜೇನು ಕೃಷಿಯ ಯೋಜನೆಗಳ ಕುರಿತು ಸಮಾಲೋಚನೆ ಮಾಡಿದರು.