ಅಂಕೋಲಾ: ಹಿಟಾಚಿ ಮೂಲಕ ಗುಡ್ಡದ ಮಣ್ಣು ಕೊರೆಯುವಾಗ ಮಣ್ಣು ಕುಸಿದು ಗುಡ್ಡದ ಪಕ್ಕದಲ್ಲಿ ನಿಂತ ವ್ಯಕ್ತಿಯ ಮೇಲೆ ರಾಶಿ- ರಾಶಿ ಮಣ್ಣು ಬಿದ್ದ ಪರಿಣಾಮವಾಗಿ ಮಣ್ಣಿನಡಿ ಸಿಲುಕಿದ ವ್ಯಕ್ತಿ ಮೃತ ಪಟ್ಟ ಘಟನೆ ಗೋಕರ್ಣದ ಚೌಡಗೇರಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಭಾಸಗೋಡ- ಶೀಳ್ಯ ಗ್ರಾಮದ ಮೋಹನದಾಸ ಹಮ್ಮಣ್ಣ ನಾಯಕ (55) ಎಂಬಾತನೇ ಮಣ್ಣಿನಡಿ ಸಿಲುಕಿ ಮೃತ ಪಟ್ಟ ದುರ್ದೈವಿ. ಗೋಕರ್ಣದ ಚೌಡಗೇರಿಯ ಜಟ್ಟು ನಾರಾಯಣ ದೇಶಭಂಡಾರಿ ಎನ್ನುವವರಿಗೆ ಸೇರಿದ್ದ ಮಾಲಕಿ ಜಮೀನಿನಲ್ಲಿ ಯಾವುದೇ ಸುರಕ್ಷತಾ ಕ್ರಮ ಹಾಗೂ ಜೀವರಕ್ಷಕ ವ್ಯವಸ್ಥೆ ಇಲ್ಲದೇ ಗುಡ್ಡ ಕೊರೆದು ಗಂಗಾವಳಿ – ಮಂಜುಗುಣಿ ನದಿಗೆ ನಿರ್ಮಸಲಾಗುತ್ತಿರುವ ಮಂಜುಗುಣಿ ನದಿಗೆ ನಿರ್ಮಸಲಾಗುತ್ತಿರುವ ಸೇತುವೆ ಕಾಮಗಾರಿಗೆ ಮಣ್ಣು ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಹಿಟಾಚಿ ಚಾಲಕ ಝಾರ್ಖಂಡ ಮೂಲದ ಹಾಲಿ ಹನೇಹಳ್ಳಿ ನಿವಾಸಿ ಮನೋಜಕುಮಾರ್ ಚೌದರಿ ಎಂಬಾತ ಗುಡ್ಡ ಕುಸಿಯುವ ಸಾಧ್ಯತೆ ಇದ್ದರೂ ನಿರ್ಲಕ್ಷ್ಯದಿಂದ ಮಣ್ಣು ಕೊರೆಯುವ ಕೆಲಸಕ್ಕೆ ಇಳಿದಿರುವುದರಿಂದ ಗುಡ್ಡದ ಮಣ್ಣು ಕುಸಿತವಾಗಲು ಕಾರಣವಾಗಿದೆ ಜಮೀನಿನ ಮಾಲಿಕ ಮತ್ತು ಹಿಟಾಚಿ ಚಾಲಕನ ಮೇಲೆ ದೂರು ದಾಖಲಿಸಲಾಗಿದೆ.
ಈ ಕುರಿತು ಗೋಕರ್ಣ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸಿ ಪಿ ಐ ವಸಂತ ಆಚಾರಿ, ಪಿ ಎಸೈ ನವೀನ ನಾಯ್ಕ, ಸುಧಾ ಅಘನಾಶಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿ ಜಿಬಿ ರಾಣೆ, ಅರುಣ ಮುಕ್ಕಣ್ಣನವರ, ವಸಂತ ನಾಯ್ಕ, ಅರವಿಂದ ಶೆಟ್ಟಿ, ಅನುರಾಜ ನಾಯ್ಕ, ಶಿವಾನಂದ ಗೌಡ ಹಾಜರಿದ್ದರು.