• first
    second
    third
    previous arrow
    next arrow
  • ಕಾರು-ಲಾರಿ ಮುಖಾಮಖಿ; ಹೆದ್ದಾರಿಯಲ್ಲಿ ಲಾರಿ ಪಲ್ಟಿ

    300x250 AD

    ಹೊನ್ನಾವರ: ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಕೆಳಗಿನೂರು ಸಮೀಪದ ಅಪ್ಸರಕೊಂಡ ತಿರುವಿನಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದ್ದು, ಲಾರಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

    300x250 AD

    ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳ ಮಾರ್ಗದಿಂದ ಹೊನ್ನಾವರ ಕಡೆ ಬರುತ್ತಿದ್ದ ಬಾಳೆಕಾಯಿ ತುಂಬಿದ ವಾಹನ ಹಾಗೂ ಅಪ್ಸರಕೊಂಡ ತಿರುವಿನಿಂದ ಹೆದ್ದಾರಿಗೆ ಏಕಾಏಕಿ ಬಂದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ಹಿನ್ನಲೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯತಯ ಉಂಟಾಗಿತ್ತು. ಸ್ಥಳಕ್ಕೆ ಮಂಕಿ ಪೋಲಿಸರು ಮತ್ತು ಐ ಆರ್.ಬಿ ಸಿಬ್ಬಂದಿ ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

    Share This
    300x250 AD
    300x250 AD
    300x250 AD
    Back to top