ಕಾರವಾರ: ಬೈಕ್ ಹಾಗೂ ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಿಣಗಾ ಘಟ್ಟದ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಸೊಲ್ಲಾಪುರ ಮೂಲದ ಮನೋಜ್ ರೇವಣಕರ್ (38), ಶೃತಿ ( 25) ಮೃತಪಟ್ಟವರು. ಇವರು ನೃತ್ಯ ಶಿಕ್ಷಕರು ಎಂದು ತಿಳಿದು ಬಂದಿದೆ. ಕಳೆದ 11 ತಿಂಗಳ ಹಿಂದೆ ಕಾರವಾರಕ್ಕೆ ಆಗಮಿಸಿ ಚೆಂಡಿಯಾದಲ್ಲಿ ವಾಸವಾಗಿದರು.
ಗುರುವಾರ ಸಂಜೆ ಚೆಂಡಿಯಾದಿಂದ ಮಾಜಾಳಿಗೆ ಬೈಕ್ ಮೂಲಕ ಹೋಗುತ್ತಿದ್ದ ವೇಳೆ ಬಿಣಗಾ ಘಾಟ ಬಳಿ ಖಾಲಿ ಕಂಟೇನರ್ ಲಾರಿಯೊಂದು ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. euttarakannada.in