ಗೋಕರ್ಣ: ಗೋಕರ್ಣದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಸಮುದ್ರದಲ್ಲಿ ಮೋಜು ಮಸ್ತಿಗೆ ಇಳಿದವರು ಜಲ್ಲಿ ಫಿಶ್ ಮೈಗೆ ತಾಗಿಸಿಕೊಂಡು ತುರಿಕೆಯಿಂದಾಗಿ ಆಸ್ಪತ್ರೆ ಸೇರುತ್ತಿದ್ದಾರೆ.
ಪ್ರವಾಸಕ್ಕೆಂದು ಪರ ಊರಿನಿಂದ ಬಂದು, ಈ ಬಗ್ಗೆ ಮಾಹಿತಿ ತಿಳಿಯದವರು ಸಮುದ್ರದಲ್ಲಿ ಮಸ್ತಿಗಾಗಿ ನೀರಿಗಿಳಿದು ಆಟವಾಡುತ್ತಿರುವ ಸಂದರ್ಭದಲ್ಲಿ ಜೆಲ್ಲಿ ಫಿಶ್ ಕಾಟಕ್ಕೆ ಸಿಲುಕುತ್ತಿದ್ದಾರೆ. ಸಮುದ್ರದಲ್ಲಿ ಈ ಸಮದಲ್ಲಿ ಹೆಚ್ಚುತ್ತಿರುವ ಜೆಲ್ಲಿ ಫಿಶ್’ನಿಂದಾಗಿ ಪ್ರವಾಸಿಗರು ತೊಂದರೆಗೆ ಸಿಲುಕುತ್ತಿದ್ದಾರೆ. ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲಿ, ಮತ್ತು ಬೇಸಿಗೆಯಿಂದ ಮಳೆಗಾಲದ ಪೂರ್ವದಲ್ಲಿ ಸಮುದ್ರದಲ್ಲಿ ಮೀನು ಜಾಸ್ತಿಯಾಗಿ ಬರುತ್ತೆ. ನೀರಲ್ಲಿ ನಿಂತಾಗ ದೇಹ ಸ್ಪರ್ಶ ಮಾಡಿ ಹೋಗುವುದರಿಂದ ಮನುಷ್ಯನ ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಲಾಗಿದೆ.