ಶಿರಸಿ: ಕುಮಟಾದಲ್ಲಿ ನಡೆದ ಲಯನ್ಸ ಜಿಲ್ಲಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ ಕ್ಲಬ್ ಸಾರ್ವಕಾಲಿಕ ದಾಖಲೆಯ ಅತಿ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ತನ್ನ ಸೇವಾ ಕಾರ್ಯಗಳಿಂದ ಶಿರಸಿ ಲಯನ್ಸ ಕ್ಲಬ್ 23 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
2020-21ರ ಸಾಲಿನಲ್ಲಿ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ವರ್ಷದ ಅತ್ಯುತಮ ಅಧ್ಯಕ್ಷರೆಂದು ಲಯನ್ ಕೆ.ಬಿ.ಲೋಕೇಶ್ ಹೆಗಡೆಯವರನ್ನು ಹಾಗೂ ಅತ್ಯುತ್ತಮ ಕಾರ್ಯದರ್ಶಿ ಲಯನ್ ಅಶ್ವತ್ಥ ಹೆಗಡೆಯವರು, ಅತ್ಯುತ್ತಮ ಖಜಾಂಚಿ ಲಯನ್ ಅಶೋಕ್ ಹೆಗಡೆಯವರೆಂದು ಗುರುತಿಸಲಾಯಿತು.
ಲಿಯೋ ವಿಂಧ್ಯಾ ಹೆಗಡೆ ಇವಳು 2020-21 ರ ಸಾಲಿನಲ್ಲಿ ಜಿಲ್ಲಾ ಮಟ್ಟದ ‘ಬೆಸ್ಟ್ ಸರ್ವಿಸ್’ ಅವಾರ್ಡ್ ಪಡೆದುಕೊಂಡಳು. ಎಂ.ಜೆ ಎಫ್ ಲಯನ್ ತ್ರಿವಿಕ್ರಮ್ ಪಟವರ್ಧನ್ ಮತ್ತು ಎಂ.ಜೆ ಎಫ್ ಲಯನ್ ರಮಾ ಪಟವರ್ಧನ್ ಇವರು Special Recognition ನ್ನು ಪಡೆದು ಗೌರವಿಸಲ್ಪಟ್ಟರು.
ಉತ್ತಮ ಜೋನ್ ಚೇರಮನ್ ಕಾರ್ಯನಿರ್ವಹಣೆಗಾಗಿ Best ZC award ನ್ನು ಎಂ.ಜೆ ಎಫ್ ಲಯನ್ ಜ್ಯೋತಿ ವಿ.ಭಟ್ ಮುಡಿಗೇರಿಸಿಕೊಂಡರು. 2020-21ರ ಸಾಲಿನಲ್ಲಿ ಶಿರಸಿ ಲಯನ್ಸ್ ಕ್ಲಬ್ ತನ್ನ ಅತ್ಯುತ್ತಮ ಸಾಧನೆಗಳಿಗಾಗಿ ‘ಲಯನ್ಸ್ ಜಿಲ್ಲಾ 317’ ರ ಅಡಿಯಲ್ಲಿ Best Club-2020-21 ಎಂದು ಗುರುತಿಸಿಕೊಂಡಿದೆ.