ಸಿದ್ದಾಪುರ: ಸಿದ್ದಾಪುರ ತಾಲೂಕಿನಲ್ಲಿ ನ.10 ಬುಧವಾರ ಒಟ್ಟೂ 3,000 ಡೋಸ್ ವ್ಯಾಕ್ಸಿನ್ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 3,000 ಡೋಸ್ ವ್ಯಾಕ್ಸಿನನ್ನು ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಡೋಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳಿಬೈಲಿನಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಹೇರೂರು 200, ಕಂಚಿಕೈ ಪ್ರಾಥಮಿಕ ಆರೋಗ್ಯ ಕೇಂದ್ರ 200, ಕವಂಚೂರು ಗ್ರಾ.ಪಂ 150, ಮಲವಳ್ಳಿ ಶಾಲೆಯಲ್ಲಿ 150, ಹಾಎಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ 150, ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150, ತ್ಯಾಗಲಿ ಪಂಚಾಯತದಲ್ಲಿ 150, ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರ 200, ಬೇಡ್ಕಣಿ ಗ್ರಾ.ಪಂ ಸಭಾಭವನ 150, ಹಲಗೇರಿ ಅಂಬೇಡ್ಕರ್ ಸಭಾಭವನ 150, ಕೋಲಸಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರ 150, ನಿಡಗೋಡು ಶಾಲೆಯಲ್ಲಿ 200, ಹಳದಕಟ್ಟಾ ಶಾಲೆಯಲ್ಲಿ 350, ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರ 200, ವಂದಾನೆಯಲ್ಲಿ 200 ಡೋಸ್ ವ್ಯಾಕ್ಸಿನ್ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.