ಸಿದ್ದಾಪುರ: ಇಲ್ಲಿನ ಅಭಿವೃದ್ಧಿಯ ಲಾಭವನ್ನು ದೇಶದ್ರೋಹಿಗಳು ಪಡೆದುಕೊಳ್ಳುತ್ತಾರೆ. ಮಂಗಳೂರು ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತಿದೆ. ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿಗೆ ತಲೆನೋವಾಗಿದ್ದು ಮಂಗಳೂರಿನ ಮೂಲ ನಿವಾಸಿಗಳಿಲ್ಲ. ಕೇರಳದವರು ನಮ್ಮ ಊರಿನ ಅಭಿವೃದ್ಧಿ ಲಾಭವನ್ನು ನಾವೇ ಪಡೆದುಕೊಳ್ಳಬೇಕು, ಮಂಗಳೂರಿನ ಅಭಿವೃದ್ಧಿ ಲಾಭವನ್ನು ಕೇರಳದವರು ಪಡೆದುಕೊಳ್ಳುತಿದ್ದಾರೆ ನಾವು ಬೇರೆಡೆ ಹೋಗಿ ಅಲ್ಪ ಸಂಬಳಕ್ಕೆ ಚಾಕರಿ ಮಾಡುತಿದ್ದೇವೆ ಎಂದರು.
ಇಷ್ಟು ದಿನ ಅಭಿವೃದ್ಧಿ ಬಗ್ಗೆ ಹೇಳುತಿದ್ದೆವು ಆದರೇ ಆ ದಿಕ್ಕಿನೆಡೆ ದಾಪುಗಾಲು ಹಾಕಿರಲ್ಲಿಲ್ಲ. ಉತ್ತರ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿಯಡೆ ದಾಪುಗಾಲು ಹಾಕುತಿದ್ದೇವೆ. ಜಿಲ್ಲೆಯಲ್ಲಿ ಮಂಗಳೂರಿಗಿಂತ ಅತೀ ದೊಡ್ಡ ಪೋರ್ಟ ಅನ್ನು ನಿರ್ಮಾಣ ಮಾಡುತಿದ್ದೇವೆ. ಏರ್ ಪೋರ್ಟ ಬರಲಿದೆ. ಇಲ್ಲಿ ಅಭಿವೃದ್ದಿ ಮಾಡಿಯೇ ನಾನು ಮಿಶ್ರಮಿಸುತ್ತೇನೆ ಎಂದರು.