• Slide
    Slide
    Slide
    previous arrow
    next arrow
  • ಬದನಗೋಡ ಗ್ರಾ.ಪಂಚಾಯತದಲ್ಲಿ ಆಧಾರ ನೋಂದಣಿ ಕೇಂದ್ರ ಸ್ಥಾಪಿಸಿ; ಡಿಸಿಗೆ ಮನವಿ

    300x250 AD


    ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ, ಶಿರಸಿ ತಾಲೂಕಿಗೆ ಅತಿ ದೊಡ್ಡ ಪಂಚಾಯತ ಆಗಿದ್ದು, ಈ ಪಂಚಾಯತ ವ್ಯಾಪ್ತಿಯಲ್ಲಿ 7 ಗ್ರಾಮಗಳು 5 ಮಜರೆಗಳು ಬರುತ್ತದೆ. ಕಾರಣ ಇಲ್ಲೊಂದು ಆಧಾರ ನೋಂದಣಿ ಕೇಂದ್ರ ಸ್ಥಾಪಿಸುವಂತೆ ಮತ್ತು ದಾಸನಕೊಪ್ಪ ಆಸ್ಪತ್ರೆಗೆ ಕಂಪೌಂಡ್ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸಾರ್ವಜನಿಕರ ಪರವಾಗಿ ಯುವರಾಜ ಜೆ ಗೌಡ ಮನವಿ ಮಾಡಿದ್ದಾರೆ.


    ಬದನಗೋಡ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು ಜನಸಂಖ್ಯೆ ಅಂದಾಜು 11,500 ಇದ್ದು, ಈ ಭಾಗದ ಸಾರ್ವಜನಿಕರು ಆಧಾರಕಾರ್ಡ ಮಾಡಿಸಲು ಅಥವಾ ಅಧಾರಕಾರ್ಡ ತಿದ್ದುಪಡಿ ಮಾಡಲು 33ಕಿಮೀ ಶಿರಸಿಗೆ ಹೋಗಬೇಕಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಆದ್ದರಿಂದ ಬದನಗೋಡ ಗ್ರಾಮ ಪಂಚಾಯತದಲ್ಲಿ ಆಧಾರ ನೋಂದಣಿ ಕೇಂದ್ರವನ್ನು ಪ್ರಾರಂಭಿಸಿ ಈ ಭಾಗದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು.

    300x250 AD

    ಮತ್ತು ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ದಾಸನಕೊಪ್ಪ ಇದರ ವ್ಯಾಪ್ತಿಯಲ್ಲಿ 20 ಸಾವಿರ ಜನಸಂಖ್ಯೆಯಿದ್ದು ಈ ಇಸ್ಪತ್ರೆಯ ಸುತ್ತ ಮುತ್ತಲು ಜಾಗ ವಿಶಾಲವಾಗಿದ್ದು, ಆದರೆ ಈ ಜಾಗಕ್ಕೆ ಕಂಪೌಂಡ್ ಇಲ್ಲದೇ ಆಸ್ಪತ್ರೆ ಸುತ್ತಮುತ್ತಲು ಮಧ್ಯಪಾನದ ಬಾಟಲಿ ಇನ್ನಿತರ ಚಟುವಟಿಕೆಗಳಿಂದ ಆಸ್ಪತ್ರೆಯ ಸುತ್ತಲು ಸ್ವಚ್ಛತೆಯ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆಸ್ಪತ್ರೆಗೆ ಸಂಬಂಧಿಸಿದ ಸರ್ಕಾರಿ ಜಾಗದ ಪಕ್ಕದಲ್ಲಿ ಖಾಸಗಿಯವರ ಜಮೀನು ಇರುವುದರಿಂದ ನಮ್ಮ ಆಸತ್ರೆಯ ಸರ್ಕಾರಿ ಜಾಗವನ್ನು ರಕ್ಷಣೆ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಸುತ್ತಲೂ ಕಂಪೌಂಡ್ ಅತೀ ಅವಶ್ಯವಿದೆ. ಶೀಘ್ರದಲ್ಲೇ ಇದಕ್ಕೆ ಮಂಜೂರಾತಿ ನೀಡಬೇಕೆಂದು ಸಾರ್ವಜನಿಕರ ಪರವಾಗಿ ಯುವರಾಜ ಗೌಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top