Slide
Slide
Slide
previous arrow
next arrow

ರಾಜ್ಯ ವಿ.ಪರಿಷತ್ 25 ಸ್ಥಾನಕ್ಕೆ ಚುನಾವಣಾ ದಿನಾಂಕ ನಿಗದಿ; ಡಿ.14 ಕ್ಕೆ ಫಲಿತಾಂಶ

300x250 AD

ಬೆಂಗಳೂರು: 2022 ಜನವರಿ 5 ರಂದು ಕೊನೆಗೊಳ್ಳಲಿರುವ ಕರ್ನಾಟಕ ವಿಧಾನಪರಿಷತ್ತಿನ 25 ಸ್ಥಾನಗಳಿಗೆ 2021ನೇ ಡಿ.10ರಂದು ಚುನಾವಣೆ ನಿಗದಿ ಪಡಿಸಲಾಗಿದೆ. ಡಿ.14 ರಂದು ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.


ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನ.16 ರಂದು ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ನ.23 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯ ನ.24 ರಂದು ನಡೆಸಲಾಗುತ್ತದೆ. ನಾಮಪತ್ರವನ್ನು ವಾಪಾಸ್ ಪಡೆಯಲು ನ.26 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.

ಇನ್ನೂ ಪರಿಷತ್ 25 ಸ್ಥಾನಗಳಿಗೆ ಡಿ. 10 ರಂದು ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಈ ಮತದಾನದ ಮತ ಎಣಿಕ ಕಾರ್ಯ ಡಿ.14ರಂದು ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ಪ್ರಕ್ರಿಯೆಯು ಡಿ.16 ರಂದು ಕೊನೆಗೊಳ್ಳಲಿರುವುದಾಗಿ ತಿಳಿಸಿದೆ.

300x250 AD

ದಿನಾಂಕ 05-01-2022ರಂದು ಅಂತ್ಯಗೊಳ್ಳಲಿರುವಂತ ಪರಿಷತ್ ಸದಸ್ಯರ ಪಟ್ಟಿ ಹೀಗಿದೆ ನೋಡಿ:

ಬೀದರ್ – ವಿಜಯ್ ಸಿಂಗ್, ಗುಲಬರ್ಗ – ಬಿ.ಜಿ.ಪಾಟೀಲ್, ಬಿಜಾಪುರ – ಎಸ್ ಆರ್ ಪಾಟೀಲ್, ಸುನೀಲ್ ಗೌಡ ಪಾಟೀಲ್, ಬೆಳಗಾವಿ – ಮಹಾಂತೇಶ್ ಕವಟಗಿಮಠ, ವಿವೇಕ್ ರಾವ್ ವಸಂತ್ ರಾವ್ ಪಾಟೀಲ್, ಉತ್ತರ ಕನ್ನಡ – ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್, ಧಾರವಾಡ – ಪ್ರದೀಪ್ ಶೆಟ್ಟರ್, ಮಾನೆ ಶ್ರೀನಿವಾಸ್, ರಾಯಚೂರು – ಬಸವರಾಜ್ ಪಾಟೀಲ್ ಇಟಗಿ, ಬಳ್ಳಾರಿ – ಕೆಸಿ ಕೊಂಡಯ್ಯ, ಚಿತ್ರದುರ್ಗ – ರಘು ಆಚಾರ್, ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್, ದಕ್ಷಿಣ ಕನ್ನಡ – ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿ, ಚಿಕ್ಕಮಗಳೂರು – ಪ್ರಾಣೇಶ್ ಎಂ.ಕೆ, ಹಾಸನ – ಎಂ.ಎ.ಗೋಪಾಲಸ್ವಾಮಿ, ತುಮಕೂರು – ಕಾಂತರಾಜ್ ( ಬಿಎಂಎಲ್), ಮಂಡ್ಯ – ಎನ್ ಅಪ್ಪಾಜಿ ಗೌಡ, ಬೆಂಗಳೂರು – ಎಂ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ – ಎಸ್ ರವಿ, ಕೋಲಾರ್ – ಸಿ ಆರ್ ಮೋಹನ್, ಕೊಡಗು – ಸುನೀಲ್ ಸುಬ್ರಹ್ಮಣಿ ಎಂ.ಪಿ., ಮೈಸೂರು – ಆರ್ ಧರ್ಮಸೇನ, ಎಸ್ ನಾಗರಾಜು ( ಸಂದೇಶ್ ನಾಗರಾಜು )

Share This
300x250 AD
300x250 AD
300x250 AD
Back to top