ಶಿರಸಿ: ಸಹಕಾರ ಸಂಸ್ಥೆಗಳಿಗೆ ಆಗುತ್ತಿರುವ ಆದಾಯ ತೆರಿಗೆ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸಚಿವರನ್ನು ಭೇಟಿಯಾಗಿ ಸೂಕ್ತ ಪರಿಹಾರಕ್ಕೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿ ತೊಂದರೆ ಬಗೆಹರಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ರಾಜ್ಯಾಧ್ಯಕ್ಷ ಬಿ.ಹೆಚ್. ಕೃಷ್ಣಾರೆಡ್ಡಿ ಹೇಳಿದರು.
ನಗರದ ಆರಾಧನಾ ಹಾಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಾಯ ತೆರಿಗೆ ಕಾಯ್ದೆ ಅನ್ವಯ ಸಹಕಾರಿ ಸಂಸ್ಥೆಗೆ ವಿನಾಯಿತಿ ಇದ್ದರೂ ಸಹ ಬೇರೆ ಬೇರೆ ಕಾರಣಗಳನ್ನು ಉಲ್ಲೇಖಿಸಿ ತೆರಿಗೆ ನೊಟೀಸ್ ಜಾರಿಯಾಗುತ್ತಿದೆ. ಆದ ಕಾರಣ ಕೇಂದ್ರ ಸಹಕಾರ ಸಚಿವರು, ಹಣಕಾಸು ಸಚಿವರನ್ನು ಭೇಟಿಯಾಗಿ ಸೂಕ್ತ ಪರಿಹಾರಕ್ಕೆ ಪ್ರಯತ್ನ ನಡೆಸಲಾಗಿದೆ. ಅಲ್ಲದೇ ತೆರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಭೇಟಿಯಾಗಿ, ಸಭೆ ನಡೆಸಿ ಸೌಹಾರ್ದ ಸಹಕಾರಿಗಳಿಗೆ ಉಂಟಾಗುತ್ತಿರುವ ತೊಂದರೆಗಳ ನಿವಾರಣೆ ಬಗ್ಗೆ ಚರ್ಚಿಸಲಾಗಿದೆ ಎಂದರು. ವಿವಿಧ ಸಹಕಾರ ಬ್ಯಾಂಕಿನ ಹಗರಣಗಳ ನಂತರ ಸಹಕಾರ ಕ್ಷೇತ್ರದ ವಿಶ್ವಾಸದ ಕೊರತೆ ಎದ್ದು ಕಾಡುತ್ತಿದೆ. ಆದ ಕಾರಣ ಠೇವಣಿದಾರ ಹಿತರಕ್ಷಣೆಗಾಗಿ ಟಾಸ್ಕ ಪೆÇೀರ್ಸ ರಚನೆ ಮಾಡಿದ್ದು, ಅದರ ಮೂಲಕ ಅವ್ಯವಹಾರದಲ್ಲಿ ತೊಡಗಿಕೊಂಡ ಸಹಕಾರಿ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪನೆಯನ್ನು ಸ್ವಾಗತಿಸಿದ ಕೃಷ್ಣರೆಡ್ಡಿ ಅವರು, ಇದೊಂದು ಆಶಾದಾಯಕ ಬೆಳವಣಿಗೆ ಎಂದು ತಿಳಿಸಿದರು. ಬೃಹದಾಕಾರವಾಗಿ ಸಹಕಾರಿ ಕ್ಷೇತ್ರ ಬೆಳೆದರೂ ಸಹ ಪ್ರತ್ಯೇಕ ಸಹಕಾರ ಸಚಿವಾಲಯ ಇರಲಿಲ್ಲ.ಸಚಿವಾಲಯ ಸ್ಥಾಪಿಸುವಂತೆ ಹಲವಾರು ಬಾರಿ ಮನವಿಯನ್ನೂ ಸಹ ನೀಡಲಾಗಿತ್ತು. ಈಗ ಸ್ಥಾಪನೆಯಾಗಿದ್ದು, ಸಹಕಾರ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಸೌಹಾರ್ದ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ.ಸಂಘಗಳ ಅಧಿನಿಯಮ 1959ಕ್ಕೆ ಕೂಡ ಅನೇಕ ತಿದ್ದುಪಡಿಗಳನ್ನು ಸರ್ಕಾರ ಮಾಡಿದೆ. ಇದರಿಂದ ತೆರಿಗೆ ಸಮಸ್ಯೆಗಳು ಬಗೆಹರಿಯಲು ಅನುಕೂಲ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ ಹೆಗಡೆ, ಸರಸ್ವತೀ ಎನ್. ರವಿ, ಕೆ.ವಿ.ನಾಯಕ, ಶಂಭುಲಿಂಗ ಹೆಗಡೆ