ಶಿರಸಿ: ಆಯ್.ಸಿಆಯ್.ಸಿ.ಆಯ್ ಬ್ಯಾಂಕ್ ಬೆಂಗಳೂರು, ಹಾಗೂ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.15 ಸೋಮವಾರ ಮುಂಜಾನೆ 10 ಗಂಟೆಗೆ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಆಯ್.ಸಿಆಯ್.ಸಿ.ಆಯ್ ಬ್ಯಾಂಕ್‍ಗೆ ಪದವೀಧರ ಅಭ್ಯರ್ಥಿಗಳ ಅಗತ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಸೇರಿದಂತೆ ಯಾವುದೇ ಪದವೀಧರರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳ ಬಹುದಾಗಿದ್ದು, ತಮ್ಮ ಶೈಕ್ಷಣಿಕ ಅರ್ಹತೆಯ ದಾಖಲೆಗಳು, ಎರಡು ಫೋಟೊಗಳನ್ನು ಅಭ್ಯರ್ಥಿಗಳು ತರುವುದು ಕಡ್ಡಾಯ ಎಂದು ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.