• Slide
    Slide
    Slide
    previous arrow
    next arrow
  • ಕೋವ್ಯಾಕ್ಸಿನ್ ಲಸಿಕೆ ಪಡೆದವರು ಯುಕೆಯಲ್ಲಿ ಐಸೋಲೆಟ್ ಆಗಬೇಕಿಲ್ಲ

    300x250 AD


    ಲಂಡನ್: ಭಾರತದ ಕೋವ್ಯಾಕ್ಸಿನ್ ಅನ್ನು ನವೆಂಬರ್ 22 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಅನುಮೋದಿತ ಕೋವಿಡ್-19 ಲಸಿಕೆಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಯುಕೆ ಸರ್ಕಾರ ಹೇಳಿದೆ. ಅಂದರೆ ಭಾರತ್ ಬಯೋಟೆಕ್ ತಯಾರಿಸಿದ ಲಸಿಕೆ ಪಡೆದುಕೊಂಡವರು ಇನ್ನು ಮುಂದೆ ಇಂಗ್ಲೆಂಡ್‍ನಲ್ಲಿ ಐಸೋಲೆಟ್ ಆಗಬೇಕಾದ ಅವಶ್ಯಕತೆ ಇಲ್ಲ.

    ವಿಶ್ವ ಆರೋಗ್ಯ ಸಂಸ್ಥೆಯು ಕೊವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಅನುಮೋದಿಸಿದ ಬಳಿಕ ಯುಕೆ ಈ ನಿರ್ಧಾರ ತೆಗೆದುಕೊಂಡಿದೆ, ಭಾರತದಲ್ಲಿ ಕೋವಿಶೀಲ್ಡ್ ನಂತರ ಕೊವ್ಯಾಕ್ಸಿನ್ ಎರಡನೇ ಅತೀ ಹೆಚ್ಚು ಬಳಸಲ್ಪಟ್ಟ ಲಸಿಕೆಯಾಗಿದೆ. ಭಾರತ ತಯಾರಿಸಿದ ಆಕ್ಸ್‍ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಅನ್ನು ಕಳೆದ ತಿಂಗಳು ಯುಕೆ ಅನುಮೋದಿತ ಪಟ್ಟಿಗೆ ಸೇರಿಸಿದೆ.

    ಕೋವ್ಯಾಕ್ಸಿನ್ ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್‍ನಲ್ಲಿರುವ ಚೀನಾದ ಸಿನೋವಾಕ್ ಮತ್ತು ಸಿನೋಫಾರ್ಮ್ ಅನ್ನು ಕೂಡ ಯುಕೆ ಸರ್ಕಾರವು ಅನುಮೋದಿತ ಲಸಿಕೆಗಳಾಗಿ ಗುರುತಿಸುತ್ತದೆ.

    300x250 AD

    `ನಾವು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿದ್ದೇವೆ ಮತ್ತು ಅಂತರಾಷ್ಟ್ರೀಯ ಲಸಿಕೆಗಳ ನಮ್ಮ ಗುರುತಿಸುವಿಕೆಯನ್ನು ವಿಸ್ತರಿಸುತೇವೆ, ಇಂದಿನ ಪ್ರಕಟಣೆಗಳು ನಮ್ಮ ಅಂತರಾಷ್ಟ್ರೀಯ ಪ್ರಯಾಣದ ಪುನರಾರಂಭದ ಮುಂದಿನ ಹಂತವನ್ನು ಗುರುತಿಸುತ್ತವೆ’ ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಹೇಳಿದ್ದಾರೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top