ಅಂಕೋಲಾ: ಪುರಸಭೆಯ ಇಬ್ಬರು ಸದಸ್ಯರು ತಮ್ಮೊಂದಿಗೆ ಅಸಭ್ಯ ವರ್ತನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿಯವರು ಸ್ಥಾಯಿ ಸಮಿತಿ ಅಧ್ಯಕ್ಷ ಜಯಾ ಬಾಲಕೃಷ್ಣ ನಾಯ್ಕ ಮತ್ತಿತರ ಬಿಜೆಪಿ ಸದಸ್ಯರು ಪಕ್ಷದ ಪದಾಧಿಕಾರಿಗಳ ಜೊತೆಗೆ ಬಂದು ದೂರಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಾಕರಮಠ ವಾರ್ಡ್ ಸದಸ್ಯ ಮಂಜುನಾಥ ಎಸ್ ನಾಯ್ಕ ಹಾಗೂ ಲಕ್ಷ್ಮೀಶ್ವರ ವಾರ್ಡ ಸದಸ್ಯ ಕಾರ್ತಿಕ ಎಸ್ ನಾಯ್ಕ ವಿರುದ್ದ ಸಾಕ್ಷಿಗಳನ್ನು ಒದಗಿಸಿ ದೂರನ್ನು ದಾಖಲಿಸಿದ್ದಾರೆ.
ನ. 2 ರಂದು ಪುರಸಭೆಯ ಸರ್ವಸದಸ್ಯರ ವಿಶೇಷ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮಂಜುನಾಥ ಎಸ್ ನಾಯ್ಕ ಸಭೆಯ ಸದಸ್ಯರ ಹಾಗೂ ಮುಖ್ಯಾಧಿಕಾರಿಗಳ ಅನುಮತಿ ಪಡೆಯದೆ ವಿಶೇಷ ಸಭೆಯ ಕಲಾಪವನ್ನು ಮೊಬೈಲ್‌ನಲ್ಲಿ ಚಿತ್ರೀಕಣ ಮಾಡಿದ್ದರು. ಹಾಗೂ ಸಭೆಯಲ್ಲಿ ಕಡತ ತರುವಂತೆ ಒತ್ತಾಯಿಸಿದರು. ಈ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದಾಗ ಅವರೊಂದಿಗೆ ವಾಗ್ವಾದ ನಡೆಸಿದರು. ಸಭೆಯು ಮುಕ್ತಾಯಗೊಂಡು ಅಧ್ಯಕ್ಷರು ನಿರ್ಗಮಿಸುತ್ತಿದ್ದಂತೆ ವಿಡಿಯೊ ಚಿತ್ರೀಕರಿಸುತ್ತ ಅಧ್ಯಕ್ಷರು ಹೆದರಿಕೊಂಡು ಓಡುತ್ತಿದ್ದಾರೆ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದೆಲ್ಲ ಆರೋಪಿಸಿದ್ದಾರೆ.
ಅಲ್ಲದೇ ರೆಕಾರ್ಡ್ ಮಾಡಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆಂದು ಇವರಿಬ್ಬರ ವಿರುದ್ಧ ಐಪಿಸಿ ಸೆ. 354, 354ಎ 504, 509, ಹಾಗೂ 341 ರಪ್ರಕಾರ ದೂರು ದಾಖಲಿಸಿದ್ದಾರೆ. ಪಿ. ಎಸ್. ಐ ಪ್ರವೀಣಕುಮಾರ ದೂರು ದಾಖಲಿಸಿಕೊಂಡಿದ್ದಾರೆ. ಪುರಸಭೆಯ ಸದಸ್ಯರ ಜೊತೆಗೆ ಬಿಜೆಪಿ ಮಂಡಲಾಧ್ಯಕ್ಷ ಸಂಜಯ ನಾಯ್ಕ, ಪ್ರಮುಖರಾದ ಅರುಣ ನಾಡಕರ್ಣಿ, ವಿನಾಯಕ ಪಡಿ, ಮಾರುತಿ ಗೌಡ, ಲಕ್ಷ್ಮಣ ಗೌಡ, ದಾಮೋದರ ರಾಯ್ಕರ್, ಕೃಷ್ಣಕುಮಾರ ಮಹಾಲೆ, ಬಾಲಕೃಷ್ಣ ನಾಯ್ಕ ಮತ್ತಿತರರು ಇದ್ದರು.