ಹೊನ್ನಾವರ: ಸರಕು ಸಾಗಣೆಯ ವಾಹನದಲ್ಲಿ ವಧೆ ಮಾಡುವ ಉದ್ದೇಶದಿಂದ ಜಾನುವಾರು ಸಾಗಾಟ ಮಾಡುತ್ತಿದ್ದ ಗೋ ಕಳ್ಳರನ್ನು ಹೊನ್ನಾವರ ಪೊಲೀಸರು ದಾಳಿ ನಡೆಸಿ, ವಾಹನ ಸಮೇತ ಬಂಧಿಸಿದ್ದಾರೆ.
ಆರೋಪಿತರನ್ನು ವೃತ್ತಿಯಲ್ಲಿ ವ್ಯಾಪರಸ್ಥನಾಗಿರುವ ಅಬ್ದುಲ್ ಖುರೇಷಿ ಅಹಮ್ಮದ್ ಸಾಬ್, ಹಾಗೂ ವೃತ್ತಿಯಲ್ಲಿ ಚಾಲಕನಾಗಿರುವ ನಗರ ಬಸ್ತಿಕೇರಿಯ ಸಚಿನ್ ಚಂದ್ರಕಾoತ ನಾಯ್ಕ ಎಂದು ಗುರುತಿಸಲಾಗಿದೆ. ಗೂಡ್ಸ್ ವಾಹನದಲ್ಲಿ ಸುಮಾರು ಎಂಟು ಸಾವಿರ ರೂಪಾಯಿ ಬೆಲೆಯ ಕಪ್ಪು ಬಿಳಿ ಬಣ್ಣದ ಒಂದು ಎತ್ತಿನ ಕರು, ಕಂದು ಬಣ್ಣದ ಒಂದು ಎತ್ತಿನ ಕರುವನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಗೋರಕ್ಷಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಪಿಎಸೈ ಶಶಿಕುಮಾರ ಸಿ. ಆರ್ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.