• Slide
    Slide
    Slide
    previous arrow
    next arrow
  • ಶಿರಸಿಯಲ್ಲಿ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ; ಓರ್ವ ಯುವತಿ ರಕ್ಷಣೆ, ಇಬ್ಬರ ಬಂಧನ

    300x250 AD

    ಶಿರಸಿ: ಇತ್ತೀಚಿನ ದಿನಗಳಲ್ಲಿ ಶಿರಸಿ ನಗರದಲ್ಲಿ ವೇಶ್ಯಾವಾಟಿಕೆ ಜಾಲ ವ್ಯಾಪಕವಾಗಿ ಹಬ್ಬಿದ್ದು, ಬಾಡಿಗೆ ಮನೆಗಳನ್ನು ಬಳಸಿ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


    ಹೊರಗಿನಿಂದ ಬಂದು ಸ್ಥಳೀಯರ ಮನೆಯನ್ನು ಬಾಡಿಗೆ ಪಡೆದು ಅದರಲ್ಲಿ ಈ ಕೃತ್ಯ ನಡೆಯುತ್ತಿದೆ ಎಂಬ ಕೆಲವರು ಆರೋಪಿಸಿದ್ದರು. ಇದೀಗ ಈ ಆರೋಪ ಸಾಬೀತಾಗಿದೆ. ನಗರದಲ್ಲಿ ಹಲವೆಡೆ ಮನೆಯನ್ನು ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಏಕಾಏಕಿ ದಾಳಿ ನಡೆಸಿದ ಶಿರಸಿ ನಗರಠಾಣೆ ಪೆÇಲೀಸರು ಅಗಸೆ ಬಾಗಿಲಿನ ಮನೆಯೊಂದರ ಮೇಲೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

    300x250 AD


    ಕೇವಲ ಮಹಾ ನಗರಗಳಲ್ಲಿ ಮಾತ್ರ ಸುದ್ದಿಯಾಗುತ್ತಿದ್ದ ಈ ರೀತಿಯ ವೇಶ್ಯಾವಾಟಿಕೆ ಇದೀಗ ಶಿರಸಿಯಂತ ಸಣ್ಣನಗರಕ್ಕೂ ವ್ಯಾಪಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳು, ಮಧ್ಯ ವಯಸ್ಸಿನ ಹೆಂಗಸರನ್ನು ಬಳಸಿಕೊಂಡು ವ್ಯವಸ್ಥಿತ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗುಮಾನಿ ಇದೆ.


    ದೂರದ ಬಾಗಲಕೋಟೆ, ಶಿಗ್ಗಾಂವ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಹೊಸಪೇಟೆ ಭಾಗದಿಂದಲೂ ಹೆಂಗಸರು, ಹುಡುಗಿಯರನ್ನು ಕರೆತರಲಾಗುತ್ತಿದ್ದು ಅವರನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕೃತ್ಯದಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಸಹ ಸಾತ್ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ದೊರಕಿದೆ. ಅಲ್ಲದೇ ಸ್ಥಳೀಯ ಕೆಲವು ಕಾಲೇಜು ಯುವತಿಯರನ್ನೂ ಪುಸಲಾಯಿಸಿ ಅವರಿಗೆ ಹಣದ ಆಮಿಷವೊಡ್ಡಿ ಈ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top