• Slide
    Slide
    Slide
    previous arrow
    next arrow
  • LPG ಸಿಲೆಂಡರ್ ವಿತರಣೆ ನಿಯಮದಲ್ಲಿ ಬದಲಾವಣೆ; OTP ಕಡ್ಡಾಯ

    300x250 AD

    ಬೆಂಗಳೂರು: ಸಿಲೆಂಡರ್ ಪಡೆಯಬೇಕೆಂದರೆ ಇನ್ನು ಮುಂದೆ ಒಟಿಪಿ ನೀಡಲೇಬೇಕು ಎಂಬ ಹೊಸ ವ್ಯವಸ್ಥೆಯನ್ನು ನ.1 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ.


    ತಪ್ಪಾದ ಮಾಹಿತಿ ಸಿಲಿಂಡರ್ ಗಳ ವಿತರಣೆ ಸ್ಥಗಿತಗೊಳಿಸಲು, ದುರ್ಬಳಕೆ ತಡೆಯಲು ಮತ್ತು ನಿಖರವಾದ ಗ್ರಾಹಕರನ್ನು ಗುರುತಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಹೊಸ ವ್ಯವಸ್ಥೆಯನ್ನು ಸಿಲಿಂಡರ್ ವಿತರಣೆ ಜಾರಿಗೆ ತರಲಾಗುತ್ತಿದೆ. ಡೆಲಿವರಿ ದೃಢೀಕರಣ ಕೋಡ್ ಮೂಲಕ ಗ್ರಾಹಕರ ಮಾಹಿತಿ ಪಡೆಯಲಾಗುವುದು. ನವೆಂಬರ್ 1ರಿಂದ ಸಿಲಿಂಡರ್ ವಿತರಣೆ ಸಂದರ್ಭದಲ್ಲಿ ಒಟಿಪಿ ನೀಡಲಾಗುತ್ತದೆ. ಒಟಿಪಿಯನ್ನು ನೀಡದಿದ್ದರೆ ಸಿಲಿಂಡರ್ ಪಡೆಯಲು ಸಾಧ್ಯವಾಗುವುದಿಲ್ಲ.

    300x250 AD


    ಗ್ಯಾಸ್ ಬುಕ್ ಮಾಡಿದ ಗ್ರಾಹಕರ ಮೊಬೈಲ್ಗೆ ಒಟಿಪಿ ಬರುವುದು. ಸಿಲಿಂಡರ್ ವಿತರಣೆಗೆ ಬಂದ ಸಂದರ್ಭದಲ್ಲಿ ಡೆಲಿವರಿ ಬಾಯ್‍ಗೆ ಒಟಿಪಿ ನೀಡಬೇಕು. ನಂತರ ಗ್ರಾಹಕರಿಗೆ ಸಿಲಿಂಡರ್ ವಿತರಿಸಲಾಗುವುದು.

    Share This
    300x250 AD
    300x250 AD
    300x250 AD
    Leaderboard Ad
    Back to top