ಶಿರಸಿ: ತಾಲೂಕಿನ ಮಣ್ಕಣಿಯಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕಳ್ಳತನ ನಡೆಸಿದವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮೀಣ ಪಿ.ಎಸ್.ಐ ಈರಯ್ಯ ಡಿ ಎನ್ ಹೇಳಿದರು.
ಇಲ್ಲಿಯ ಕೊಳಗಿಬೀಸ್ ನಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ವ್ಯಾಜ್ಯಗಳಿಗೆ ಸಂಬಂಧಿಸಿದಂತಹ ಕೃಷಿ ಸಂಬಂಧಿ ಪ್ರಕರಣಗಳಿಗೆ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸುವುದಿಲ್ಲ. ಆದರೆ, ಕಳ್ಳತನ ಪ್ರಕರಣವನ್ನು ನಾವು ಸಹಿಸುವುದಿಲ್ಲ. ಮಣ್ಕಣಿ ಘಟನೆ ಕುರಿತು ಆರೋಪಿಗಳ ಪತ್ತೆಗೆ ನಾವು ಕೆಲಸ ಶುರು ಮಾಡಿದ್ದೇವೆ. ಕಳ್ಳರನ್ನು ಹಿಡಿದೇ ಹಿಡಿತ್ತೇವೆ. ಆದರೆ, ರೈತರೂ ಈ ಬಗ್ಗೆ ಕಾಳಜಿ ವಹಿಸಬೇಕು.
ರಾತ್ರಿ ಹೊತ್ತು ಊರವರನ್ನು ಬಿಟ್ಟು ಹೊರಗಿನವರು ಬಂದ್ರೆ ಗಾಡಿಗಳನ್ನು ನಂಬರ್ ನೋಟ್ ಮಾಡಿಕೊಂಡು ತಿಳಿಸಿ ಎಂದರು.
ಪ್ರೊ.ಎಸ್ ಐ ಶ್ಯಾಮ ಪಾವಸ್ಕರ್, ರಮೇಶ ಮುಚ್ಚಂಡಿ ಇತರರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ ಹೆಗಡೆ ನೇರ್ಲದ್ದ, ಗ್ರಾಮದ ಪ್ರಮುಖರಾದ ಉಮಾಪತಿ ಭಟ್ ಮತ್ತಿಗಾರ, ಗುರುಪಾದ ಹೆಗಡೆ ಬೊಮ್ನಳ್ಳಿ, ರವಿ ಹೆಗಡೆ ಹೊಸ್ಮನೆ, ಶ್ರೀಧರ ಹೆಗಡೆ ಇಳ್ಳುಮನೆ, ಶ್ರಿಪತಿ ಹೆಗಡೆ ನೇರ್ಲದ್ದ ಇತರರಿದ್ದರು.