• Slide
    Slide
    Slide
    previous arrow
    next arrow
  • ನ.13ಕ್ಕೆ ‘ಕರ್ಮಯೋಗಿ ವೈದ್ಯರತ್ನ ಬಾಳುರಾಯರು’ ಗ್ರಂಥ ಬಿಡುಗಡೆ ಸಮಾರಂಭ

    300x250 AD

    ಶಿರಸಿ: ದಿ. ಅನಂತ ನೀಲಕಂಠ ಪಟವರ್ಧನರ ಜನ್ಮ ಶತಮಾನೋತ್ಸವ ವರ್ಷ 2020-2021ರ ನಿಮಿತ್ತ ಅವರ ಚಿರಸ್ಮರಣೆಗಾಗಿ, ಡಾ.ಎ.ಎನ್ ಪಟವರ್ಧನ ಫೌಂಡೇಶನ್(ರಿ.)ಶಿರಸಿ, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಶಿಕ್ಷಣ ಸಂಸ್ಥೆ(ರಿ.) ಇವರ ಸಹಯೋಗದಲ್ಲಿ ಅವರ ಜೀವನ ಚರಿತ್ರೆ ಮತ್ತು ಅವರ ಬಗ್ಗೆ ಅನೇಕ ವೈದ್ಯರು, ಗಣ್ಯರು, ಅವರ ಚಿಕಿತ್ಸೆಯಿಂದ ಉಪಕೃತರಾದವರು ಬರೆದ ಲೇಖನಗಳನ್ನು ಒಳಗೊಂಡ ಹೊತ್ತಿಗೆ ‘ಕರ್ಮಯೋಗಿ ವೈದ್ಯರತ್ನ ಬಾಳುರಾಯರು’ ಗ್ರಂಥ ಬಿಡುಗಡೆ ಸಮಾರಂಭ ನ.13 ಶನಿವಾರ 4 ಗಂಟೆಗೆ ಲಯನ್ಸ ಸಭಾಭವನದಲ್ಲಿ ನಡೆಯಲಿದೆ.


    ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು ಗ್ರಂಥವನ್ನು ಬಿಡುಗಡೆ ಮಾಡಿ ಆಶೀರ್ವಚನವನ್ನು ನೀಡುವರು. ಮುಖ್ಯ ಅತಿಥಿಗಳಾಗಿ ವಿಧಾನಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿದ್ವಾನ್ ಜ್ಯೋತಿಷಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿಯವರು ಆಗಮಿಸಲಿದ್ದಾರೆ.

    300x250 AD


    ಶಿರಸಿಯ ನಾಗರಿಕರು, ಅಭಿಮಾನಿಗಳು ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಅಧ್ಯಕ್ಷರು ಮತ್ತು ಸಮಸ್ತ ಸದಸ್ಯರು, ಡಾ.ಎ.ಎನ್.ಪಟವರ್ಧನ ಫೌಂಡೇಶನ್, ಲಯನ್ಸ ಕ್ಲಬ್ ಹಾಗು ಲಯನ್ಸ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top