• Slide
    Slide
    Slide
    previous arrow
    next arrow
  • ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅನಂತ ಹೆಗಡೆ ಪ್ರಮಾಣ ವಚನ

    300x250 AD


    ಶಿರಸಿ: ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಶಿರಸಿಯ ಅನಂತ ರಾಮನಾಥ ಹೆಗಡೆ, ಹುಡ್ಲಮನೆ ಅವರು ಪದವಿ ಅಧಿಕಾರ ಪ್ರಮಾಣ ವಚನವನ್ನು ಇಂದು ಸ್ವೀಕಾರ ಮಾಡಿರುವ ಹಿನ್ನೆಲೆಯಲ್ಲಿ ಶಿರಸಿ ವಕೀಲ ಸಂಘದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.


    ಶಿರಸಿ ವಕೀಲ ಸಂಘದ ಸದಸ್ಯರಾಗಿ ಉಚ್ಛ ನ್ಯಾಯಾಲಯದಲ್ಲಿ ದಶಕಗಳ ಕಾಲ ವಕೀಲ ವೃತ್ತಿಯಿಂದ ನೇರವಾಗಿ ಉಚ್ಛ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ನೇಮಕವಾಗಿರುವದು ಶಿರಸಿ ವಕೀಲರ ಹರ್ಷಕ್ಕೆ ಕಾರಣವಾಗಿತ್ತು.

    300x250 AD


    ಬೆಂಗಳೂರಿನ ರಾಜಭವನದಲ್ಲಿ ಗಾಜಿನ ಮನೆಯಲ್ಲಿ ಇಂದು ಮುಂಜಾನೆ 9:30 ಕ್ಕೆ ಇನ್ನಿತರ ಎರಡು ಸಹ ನ್ಯಾಯಮೂರ್ತಿಯೊಂದಿಗೆ ಕರ್ನಾಟಕ ರಾಜ್ಯಪಾಲರಾದ ತಾವರ್ ಚಂದ್ ಗೆಲೋಟ ಅವರಿಂದ ಪದವಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತಗೊಂಡಿರುವದು ವಿಶೇಷವಾಗಿತ್ತು. ಪದವಿ ಅಧಿಕಾರ ಪ್ರಮಾಣ ವಚನ ಸಾಕ್ಷಿಕರಿಸಲು ಸಾಕಷ್ಟು ಪ್ರಮಾಣದಲ್ಲಿ ಶಿರಸಿ, ಜಿಲ್ಲೆಯ ವಿವಿಧ ಕಡೆಯಿಂದ ಹಾಗೂ ಧಾರವಾಢ ಇನ್ನೀತರ ವಕೀಲರು ಭಾಗವಹಿಸಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top