• Slide
    Slide
    Slide
    previous arrow
    next arrow
  • ಹೆಗಡೆಕಟ್ಟಾ ಸೊಸೈಟಿಗೆ ರೂ. 41.03ಲಕ್ಷ ಲಾಭ; ನ.12ಕ್ಕೆ ವಾರ್ಷಿಕ ಸಭೆ

    300x250 AD


    ಶಿರಸಿ: ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವು 2020-21 ನೇ ಆರ್ಥಿಕ ವರ್ಷಾಂತ್ಯಕ್ಕೆ ರೂ. 4102804.24 ನಿವ್ವಳ ಲಾಭ ಗಳಿಸಿದ್ದು, ಇದು ಕಳೆದ ಸಾಲಿಗಿಂತ ಶೇ. 246216.77 ರಷ್ಟು ಹೆಚ್ಚಾಗಿರುತ್ತದೆ. ಸದಸ್ಯರ ಪಾಲುಧನದ ಮೇಲೆ ಶೇ. 13 ರಂತೆ ಲಾಭಾಂಶ ನೀಡಲು ಆಡಳಿತ ಸಮಿತಿ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


    ವರದಿಯ ವರ್ಷಾಂತ್ಯಕ್ಕೆ ಸಂಘದಲ್ಲಿ 679 ಸದಸ್ಯರಿದ್ದು ಶೇರು ಬಂಡವಾಲು ರೂ. 5327600 ಹೊಂದಿದ್ದು, ಠೇವುಗಳು ರೂ. 179945647.73 ಇರುತ್ತಿದ್ದು ವರದಿಯ ವರ್ಷದಲ್ಲಿ 169554296.96 ಸಾಲ ವಿತರಿಸಿದ್ದು, ವರದಿಯ ವರ್ಷಾಂತ್ಯಕ್ಕೆ ಶೇ. 98.94 ವಸೂಲಾತಿಯಾಗಿದ್ದು ಇರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಹಾಗೂ ಇತರ ನಿಧಿಗಳು ರೂ. 29478796.10 ಇರುತ್ತಿದ್ದು, ಸಂಘದ ದುಡಿಯುವ ಬಂಡವಾಳವು ಕಳೆದ ಸಾಲಿಗಿಂತ ರೂ. 12792047.97 ರಷ್ಟು ಹೆಚ್ಚಳವಾಗಿ ವರ್ಷಾಂತ್ಯಕ್ಕೆ ರೂ. 248030954.64 ಇರುತ್ತದೆ. ಸಂಘವು ವರದಿಯ ವರ್ಷದಲ್ಲಿ ಸದಸ್ಯರ ಮಹಸೂಲುಗಳನ್ನು ಮಾರ್ಕೆಟಿಂಗ ಸೊಸೈಟಿಗಳ ಮೂಲಕ 5658 ಕ್ವಿ. 75.100 ಕೆ.ಜಿ ವಿಕ್ರಯಿಸಿದ್ದು ಅದರ ಮೌಲ್ಯ ರೂ. 139761301 ಆಗಿರುತ್ತದೆ.

    ಈ ಮೇಲಿನ ಮಹಸೂಲು ವಿಕ್ರಯಿಸಿದ್ದರಿಂದ ರೂ. 557929.00 ರಿಬೇಟನ್ನು ಪಡೆದಿದೆ. ಸಂಘದ ಕಿರಾಣಿ ವಿಭಾಗ ಹಾಗೂ ಯಚಡಿ ಕಿರಾಣಿ ವಿಭಾಗದಲ್ಲಿ ಮತ್ತು ಸೂಪರಮಾರ್ಕೆಟ ವಿಭಾಗದಲ್ಲಿ ರೂ. 5 ಕೋಟಿಗೂ ಹೆಚ್ಚು ಸಾಮಾನುಗಳನ್ನು ವಿಕ್ರಯಿಸಿ ರೂ. 13 ಲಕ್ಷಕ್ಕೂ ಹೆಚ್ಚು ನಿಕ್ಕೀ ಲಾಭ ಗಳಿಸಿ ಮುಖ್ಯ ವಿಭಾಗಕ್ಕೆ ವರ್ಗಾಯಿಸಿದೆ. ಸಂಘವು ಕಳೆದ 14 ವರ್ಷಗಳಿಂದ ಸತತವಾಗಿ ಆಡಿಟ್ ವರ್ಗೀಕರಣದಲ್ಲಿ ‘ಅ’ ಶ್ರೇಣಿಯಲ್ಲಿ ಮುಂದುವರೆದಿರುತ್ತದೆ. ಅಷ್ಟೇ ಅಲ್ಲದೇ ಹಸಿ ಅಡಿಕೆ ಟೆಂಡರ ಪ್ರಕ್ರಿಯೆಯನ್ನು ನಡೆಸಿ ಸುಮಾರು 2300 ಕ್ವಿ. ಗೂ ಹೆಚ್ಚು ವಿಕ್ರಯಿಸಿ 3.44 ಲಕ್ಷ ರೂ ಲಾಭ ಗಳಿಸಿರುತ್ತದೆ.

    300x250 AD


    ನ.12ರ ಶುಕ್ರವಾರ ಮಧ್ಯಾಹ್ನ 3.30 ಕ್ಕೆ ಸಂಘದ 2020-2021 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿ ಸಂಘದ ಯಶಸ್ಸಿಗೆ ಕಾರಣರಾದ ಎಲ್ಲ ಸದಸ್ಯರನ್ನೂ ಸಂಘದ ಅಧ್ಯಕ್ಷರಾದ ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಅಭಿನಂಧಿಸಿರುತ್ತಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top