ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇ
ಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ ||
ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ ಸೋಲೆಂಬುದಿಲ್ಲ.
- ಶ್ರೀ ನವೀನ ಗಂಗೋತ್ರಿ